ಮ್ಯಾನ್ಮಾರ್​ನಿರಾಶ್ರಿತರಿಗೆ ಮುಂದುವರಿಯಲಿದೆ ನೆರವು : ಸಿಎಂ ಲಾಲ್ದುಹೋಮ

mijoram
Published on

ಯಾಂಗೊನ್: ಮ್ಯಾನ್ಮಾರ್​ನಲ್ಲಿ ಮಿಲಿಟರಿ ದಂಗೆಯ ನಂತರ 2021ರ ಫೆಬ್ರವರಿಯಲ್ಲಿ ತಾಯ್ನಾಡು ಬಿಟ್ಟು ಬಂದ ಚಿನ್ ಸಮುದಾಯಕ್ಕೆ ಸೇರಿದ 31,000 ಕ್ಕೂ ಹೆಚ್ಚು ಜನ ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದು, ನೆರವು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಲಾಲ್ದುಹೋಮ ತಿಳಿಸಿದರು.

ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಮ್ಯಾನ್ಮಾರ್‌ನಿಂದ ನಿರಾಶ್ರಿತರಾಗಿ ಮಣಿಪುರಕ್ಕೆ ಬಂದವರು ಬಳಿಕ ಅಲ್ಲಿನ ಜನರ ಆಂತರಿಕ ಕಲಹದಿಂದಾಗಿ ಸ್ಥಳಾಂತರಗೊಂಡಿದ್ದು, ಅವರಿಗೆ ನಮ್ಮ ಸರ್ಕಾರ ನೆರವು ನೀಡುವುದನ್ನು ಮುಂದುವರಿಸಲಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಹೇಳಿದ್ದಾರೆ.

ಲಾಲ್ದುಹೋಮ ಅವರು ದೆಹಲಿಯಿಂದ ವಾಪಸಾದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೇಂದ್ರವು ಮ್ಯಾನ್ಮಾರ್ ಪ್ರಜೆಗಳಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡಲು ಸಾಧ್ಯವಾಗದಿದ್ದರೂ, ಅವರಿಗೆ ಪರಿಹಾರವನ್ನು ಒದಗಿಸುವಲ್ಲಿ ಅದು ನಮ್ಮೊಂದಿಗೆ ಸಹಕರಿಸಲು ಸಿದ್ಧವಾಗಿದೆ. ಜನಾಂಗೀಯ ಹಿಂಸಾಚಾರದಿಂದ ತಮ್ಮ ಮನೆಗಳನ್ನು ತೊರೆದ ಮಣಿಪುರದ ಜನರಿಗೆ ಸಹ ಸಹಾಯಸ್ತ ಚಾಚಲಾಗುವುದು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net