More

    ಹಿಂದು ಭಾವನೆಗಳಿಗೆ ಧಕ್ಕೆ: ನಯನತಾರಾ ಚಿತ್ರದ ವಿರುದ್ಧ ಪೊಲೀಸರಿಗೆ ದೂರು

    -against-makers-nayantharas-annapoorani

    ಮುಂಬೈ: ಭಗವಾನ್ ಶ್ರೀರಾಮನನ್ನು ಅವಹೇಳನ ಮಾಡಿದ ನಯನತಾರಾ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ‘ಸೊಕ್ಕು’ ಸಿದ್ದರಾಮಯ್ಯ ಪೇಟೆಂಟ್ : ಸಿಎಂ ವಿರುದ್ಧ ಜೆಡಿಎಸ್ ಕಿಡಿ
    ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಭಗವಾನ್ ರಾಮನನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ.
    ಚಲನಚಿತ್ರವು ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ. ಹಿಂದು ಧರ್ಮವಿರೋಧಿ ನಿಲುವು ಚಿತ್ರದಲ್ಲಿರುವುದರಿಂದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಜ.6 ರಂದು, ಎಕ್ಸ್(ಟ್ವಿಟರ್) ಮೂಲಕ ಸೋಲಂಕಿ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಲನಚಿತ್ರವನ್ನು ಹಿಂದು ವಿರೋಧಿ ಎಂದು ಲೇಬಲ್ ಮಾಡಿದ್ದು, ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್, ಚಿತ್ರದ ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಎರಡರ ವಿರುದ್ಧವೂ ಎಫ್‌ಐಆರ್ ದಾಖಲಿಸುವ ಮೂಲಕ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಇನ್ನು ಅನ್ನಪೂರ್ಣಿ ಆಹಾರದ ದೇವತೆಯಾಗಿದ್ದು, ನಯನತಾರಾ ಸಂಪ್ರದಾಯವನ್ನು ಮೀರಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ರಮೇಶ್ ಸೋಲಂಕಿ ಎಕ್ಸ್​(X) ನಲ್ಲಿ ಪೋಸ್ಟ್ ಮಾಡಿದ್ದು, ಅನ್ನಪೂರ್ಣಿ ಚಿತ್ರದ ನಿರ್ಮಾಪಕರ, ನಿರ್ದೇಶಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸುಮಧುರ ಕಂಠದ ಹುಡುಗಿಯಿಂದ ಫೋನ್ ಕರೆ ಬಂದಿದೆಯೇ?ನಂಬಿದರೆ ಅಷ್ಟೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts