More

    ಭಾರತೀಯ ವಾಯುಪಡೆಯ ‘ಸಿ-130ಜೆ’ ವಿಮಾನ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಲ್ಯಾಂಡಿಂಗ್!

    ನವದೆಹಲಿ: ಭಾರತೀಯ ವಾಯುಪಡೆಯು ಸಿ-130ಜೆ ವಿಮಾನವನ್ನು ಸವಾಲೆನಿಸುವ ಹಿಮಾಲಯ ಪರ್ವತ ಶ್ರೇಣಿಗಳ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.

    ಇದನ್ನೂ ಓದಿ: ಹಿಂದು ಭಾವನೆಗಳಿಗೆ ಧಕ್ಕೆ: ನಯನತಾರಾ ಚಿತ್ರದ ವಿರುದ್ಧ ಪೊಲೀಸರಿಗೆ ದೂರು
    8,800 ಅಡಿಗಳಷ್ಟು ಎತ್ತರದಲ್ಲಿ ಹಿಮಾಲಯದ ಪರ್ವತಶ್ರೇಣಿಯಲ್ಲಿ ಬರುವ ಕಾರ್ಗಿಲ್ ಏರ್‌ಸ್ಟ್ರಿಪ್ ನಲ್ಲಿ ರಾತ್ರಿ ವೇಳೆ ವಿಮಾನ ಲ್ಯಾಂಡಿಗ್​ ಮಾಡುವುದು ಪೈಲಟ್‌ಗಳಿಗೆ ಸವಾಲಾಗಿತ್ತು. ಆದರೆ ಭಾರತೀಯ ವಾಯುಪಡೆಯ (ಐಎಎಫ್​) ಸಿ-130ಜೆ ವಿಮಾನವು ಸವಾಲಿನ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಐತಿಹಾಸಿಕ ರಾತ್ರಿ ಲ್ಯಾಂಡಿಂಗ್ ಸಾಧಿಸಿದೆ. ಇದರ ವೀಡಿಯೋವನ್ನು ಐಎಎಫ್​ ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.

    ಇದು ತರಬೇತಿ ಕಾರ್ಯಾಚರಣೆಯ ಭಾಗವಾಗಿತ್ತು. ಆದರೆ ತರಬೇತಿಯ ವಿಶೇಷತೆಗಳನ್ನು ಬಹಿರಂಗಪಡಿಸದಿದ್ದರೂ, ಹಾರಾಟದ ಸಮಯದಲ್ಲಿ ಕತ್ತಲಿದ್ದರೂ ಲ್ಯಾಂಡಿಂಗ್ ಅನ್ನು ನಿಖರ ಸ್ಥಳದಲ್ಲಿ ಮಾಡಲು ಸಾಧ್ಯವಾಗಿರುವುದು ಪೈಲಟ್ ಪರಿಣತಿಯನ್ನು ಒತ್ತಿಹೇಳುತ್ತದೆ ಎಂದಿದೆ.
    ಈ ಸಾಧನೆಯು ಐಎಎಫ್‌ನ ಸಾಮರ್ಥ್ಯವನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಕಾರ್ಯಾಚರಣೆಯ ಸಿದ್ಧತೆಗೆ ಅದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಸಾಧನೆ ಅನಿರೀಕ್ಷಿತ ಸಂದರ್ಭಗಳನ್ನು ನಿಭಾಯಿಸಲು ಐಎಎಫ್​ನ ಸನ್ನದ್ಧತೆಯನ್ನು ದೃಢಪಡಿಸುತ್ತದೆ. ಸವಾಲಿನ ಪರಿಸರದಲ್ಲಿ ಯಶಸ್ವಿ ಕಾರ್ಯಾಚರಣೆಗೆ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದೆ.

    ಕಾರ್ಗಿಲ್ ಏರ್‌ಸ್ಟ್ರಿಪ್ ಎಲ್ಲಿದೆ?: 8,800 ಅಡಿಗಳಷ್ಟು ಎತ್ತರದಲ್ಲಿ ಸವಾಲಿನ ಹಿಮಾಲಯದ ಭೂಪ್ರದೇಶದ ನಡುವೆ ನೆಲೆಗೊಂಡಿರುವ ಕಾರ್ಗಿಲ್ ಏರ್‌ಸ್ಟ್ರಿಪ್, ಪೈಲಟ್‌ಗಳಿಗೆ ಅನನ್ಯ ಸವಾಲುಗಳನ್ನು ಒದಗಿಸುತ್ತದೆ. ಅತಿ ಎತ್ತರ, ಅನಿರೀಕ್ಷಿತ ಹವಾಮಾನ ಮತ್ತು ಅಸಾಧಾರಣ ಗಾಳಿಯನ್ನು ಎದುರಿಸಿ ಲ್ಯಾಂಡಿಂಗ್ ಮಾಡಬೇಕಾದರೆ ಅಸಾಧಾರಣ ನಿಖರತೆ ಮತ್ತು ಕೌಶಲ್ಯವ ಹೊಂದಿರುವುದು ಅಗತ್ಯವಾಗಿರುತ್ತದೆ. ಕಳೆದ ನವೆಂಬರ್‌ನಲ್ಲಿ ಉತ್ತರಾಖಂಡದ ಮೂಲ ವಾಯುನೆಲೆಯಲ್ಲಿ ಎರಡು ಲಾಕ್‌ಹೀಡ್ ಮಾರ್ಟಿನ್ ಸಿ-130ಜೆ-30 ‘ಸೂಪರ್ ಹರ್ಕ್ಯುಲಸ್’ ಮಿಲಿಟರಿ ಸಾರಿಗೆ ವಿಮಾನಗಳನ್ನು ಐಎಎಫ್​ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಪರ್ವತ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗಾಗಿ ಭಾರೀ ಇಂಜಿನಿಯರಿಂಗ್ ಉಪಕರಣಗಳನ್ನು ತಲುಪಿಸಲು ಪ್ರತಿಕೂಲ ಹವಾಮಾನವನ್ನು ನ್ಯಾವಿಗೇಟ್ ಮಾಡುವುದು ಆ ಮಿಷನ್ ಒಳಗೊಂಡಿತ್ತು.

    ‘ಸೊಕ್ಕು’ ಸಿದ್ದರಾಮಯ್ಯ ಪೇಟೆಂಟ್ : ಸಿಎಂ ವಿರುದ್ಧ ಜೆಡಿಎಸ್ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts