More

    ರಾಜಸ್ಥಾನದಲ್ಲಿ ಮಿಗ್​-21 ಫೈಟರ್​ ಜೆಟ್​ ಪತನ: ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

    ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್​-21 ಫೈಟರ್​ ಜೆಟ್​ ಪತನಗೊಂಡು ಪೈಲಟ್​ ವಿಂಗ್​ ಕಮಾಂಡರ್​ ಹರ್ಷಿತ್​ ಸಿನ್ಹಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಬಳಿ ಶುಕ್ರವಾರ (ಡಿ.24) ರಾತ್ರಿ ನಡೆದಿದೆ.

    ಈ ಮಾಹಿತಿಯನ್ನು ವಾಯುಸೇನೆಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಖಚಿತಪಡಿಸಿದೆ. ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಮಿಗ್​-21 ಫೈಟರ್​ ಜೆಟ್ ತರಬೇತಿ ವಿಹಾರದ ಸಮಯದಲ್ಲಿ ಪಶ್ಚಿಮ ವಲಯದಲ್ಲಿ ಪತನಗೊಂಡಿದೆ. ಮತ್ತಷ್ಟು ಮಾಹಿತಿ ಬರಬೇಕಿದ್ದು, ತನಿಖೆ ಆದೇಶಿಸಲಾಗಿದೆ ಎಂದು ತಿಳಿಸಿದೆ.

    ರಾಜಸ್ಥಾನದ ಸ್ಯಾಮ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಡೆಸೆರ್ಟ್​ ನ್ಯಾಷನಲ್​ ಪಾರ್ಕ್​ ಏರಿಯಾದಲ್ಲಿ ಜೆಟ್​ ಪತನಗೊಂಡಿದೆ ಎಂದು ಜೈಸಲ್ಮೇರ್ ಪೊಲೀಸ್​ ವರಿಷ್ಠಾಧಿಕಾರಿ ಅಜಯ್​ ಸಿಂಗ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೆಲವು ಗಂಟೆಗಳ ಬಳಿಕ ಮತ್ತೊಂದು ಟ್ವೀಟ್​ ಮಾಡಿರುವ ವಾಯುಸೇನೆ, ಜೆಟ್​ ಪತನದಲ್ಲಿ ಪೈಲಟ್​ ವಿಂಗ್​ ಕಮಾಂಡರ್​ ಹರ್ಷಿತ್​ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಹೇಳಲು ಅತೀವ ದುಃಖವಾಗುತ್ತಿದೆ. ಈ ಸಂದರ್ಭದಲ್ಲಿ ದಿಟ್ಟ ಯೋಧನ ಕುಟುಂಬದ ಜತೆ ನಾವೆಲ್ಲರು ನಿಲ್ಲುತ್ತೇವೆ ಎಂದಿದೆ. (ಏಜೆನ್ಸೀಸ್​)

    ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

    ಸಾರ್ವಜನಿಕರ ಕ್ಷಮೆಯಾಚಿಸದಿದ್ರೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ: ಸನ್ನಿ ಲಿಯೋನ್​ಗೆ ಅರ್ಚಕರ ಎಚ್ಚರಿಕೆ

    ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts