More

    ತರಬೇತಿ ಸಮಯದಲ್ಲಿ ವಾಯುಪಡೆಯ ಎರಡು ಯುದ್ಧ ವಿಮಾನ ಪತನ: ಮಧ್ಯಪ್ರದೇಶದಲ್ಲಿ ಘಟನೆ

    ಭೋಪಾಲ್​: ದೈನಂದಿನ ತರಬೇತಿ ಸಮಯದಲ್ಲಿ ಭಾರತೀಯ ವಾಯುಪಡೆಯ ಸುಖೋಯ್​-30 ಮತ್ತು ಮಿರಾಜ್​ 2000 ಹೆಸರಿನ ಎರಡು ಯುದ್ಧ ವಿಮಾನಗಳು ಪತನವಾಗಿರುವ ಘಟನೆ ಶನಿವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಎರಡೂ ಯುದ್ಧ ವಿಮಾನಗಳು ಗ್ವಾಲಿಯರ್​ ವಾಯುನೆಲೆಯಿಂದ ಟೇಕಾಫ್​ ಆದ ಕೆಲವೇ ಹೊತ್ತಿನಲ್ಲಿ ಬೇರೆ ಬೇರೆ ಸ್ಥಳದಲ್ಲಿ ಪತನಗೊಂಡಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಘಟನೆಯಲ್ಲಿ ಇಬ್ಬರು ಪೈಲಟ್​ಗಳು ಪಾರಾಗಿದ್ದಾರೆ. ಬೆಳಗ್ಗೆ 5.30ಕ್ಕೆ ಘಟನೆ ಸಂಭವಿಸಿದೆ ಎಂದು ಮೊರೆನಾ ಜಿಲ್ಲಾಧಿಕಾತಿ ಮಾಹಿತಿ ನೀಡಿದ್ದು, ಪೈಲಟ್​ಗಳಿಗೆ ಸಣ್ಣಪುಟ್ಟ ಗಾಯಳಾಗಿವೆ.

    ಮೊರೆನಾದಲ್ಲಿ ಸ್ಥಳೀಯರು ಚಿತ್ರೀಕರಿಸಿದ ವಿಡಿಯೋಗಳು ನೆಲದ ಮೇಲೆ ವಿಮಾನದ ಅವಶೇಷಗಳು ಬಿದ್ದಿರುವುದನ್ನು ತೋರಿಸಿದೆ. ಎರಡು ಜೆಟ್‌ಗಳು ಗಾಳಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆಯೇ ಎಂಬುದನ್ನು ಅಧ್ಯಯನ ಮಾಡಲು ಏರ್ ಫೋರ್ಸ್ ತನಿಖಾ ತಂಡವನ್ನು ನೇಮಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 124ನೇ ಜಯಂತಿ: ಕೊಡಗಿನ ವೀರನ ಸ್ಮರಣೆ ಹೊಸ ತಲೆಮಾರಿಗೆ ಇಂದಿಗೂ ಸ್ಫೂರ್ತಿ

    ಹುಡುಗಿಯ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಂದ ಕಾಲೇಜು ವಾರ್ಡನ್​! ಉಡುಪಿಯಲ್ಲಿ ಅಮಾನವೀಯ ಕೃತ್ಯ

    ತಾಯಿಯನ್ನು ವಿದೇಶಿ ಪ್ರವಾಸಕ್ಕೆ ಕರೆದೊಯ್ದ ಪುತ್ರ: ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts