ಟಿ20 ಕ್ರಿಕೆಟ್​ಗೆ ಮಿಚೆಲ್​ ಸ್ಟಾರ್ಕ್​ ನಿವೃತ್ತಿ! ಕಾರಣ ಬಹಿರಂಗಪಡಿಸಿದ ಆಸ್ಟ್ರೇಲಿಯಾದ ಸ್ಟಾರ್ ವೇಗಿ | Mitchell Starc

ವಿಜಯವಾಣಿ (17)
Published on

Mitchell Starc: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಅನುಭವಿ ಹಾಗೂ ಅತ್ಯುತ್ತಮ ವೇಗಿ ಮಿಚೆಲ್​ ಸ್ಟಾರ್ಕ್​, ಇದೀಗ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದಾರೆ. ಈ ವಿಷಯ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರವಲ್ಲದೇ ಇತರೆ ತಂಡದ ಕ್ರಿಕೆಟಿಗರಿಗೂ ಅಚ್ಚರಿ ಮೂಡಿಸಿದೆ.

ಆಸ್ಟ್ರೇಲಿಯಾ ಪರ ಆಡಿದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಮಿಚೆಲ್ ಸ್ಟಾರ್ಕ್, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಸದ್ಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಪರ 65 ಟಿ20 ಪಂದ್ಯಗಳನ್ನಾಡಿರುವ ಸ್ಟಾರ್ಕ್​, 2021ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದರು. ಟೆಸ್ಟ್​ ಮತ್ತು ಏಕದಿನ ಪಂದ್ಯಗಳನ್ನು ಹೊರತುಪಡಿಸಿ ಕೇವಲ ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿರುವ ಸ್ಟಾರ್ಕ್, ತಮ್ಮ ನಿರ್ಧಾರದ ಹಿಂದಿರುವ ಬಲವಾದ ಕಾರಣವೇನು ಎಂಬುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.

"ಟೆಸ್ಟ್ ಕ್ರಿಕೆಟ್ ನನ್ನ ಪ್ರಮುಖ ಆದ್ಯತೆ. ಅದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯಾ ಪರ ನಾನು ಆಡಿದ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನು, ವಿಶೇಷವಾಗಿ 2021ರ ವಿಶ್ವಕಪ್ ಅನ್ನು ಮರೆಯಲು ಸಾಧ್ಯವಿಲ್ಲ. ಆ ಸಮಯವನ್ನು ಆನಂದಿಸಿದ್ದೇನೆ. ಇದರಲ್ಲಿ ನಾವು ಗೆಲುವು ಸಾಧಿಸಿದೆವು ಅಂತಲ್ಲ. ಒಂದು ಬಲಿಷ್ಠ ತಂಡ ಮತ್ತು ಆ ಹಾದಿಯಲ್ಲಿ ಅನುಭವಿಸಿದ ಕ್ಷಣ, ಮೋಜಿನ ಬಗ್ಗೆ ನನಗೆ ಖುಷಿಯಿದೆ. ಪ್ರಸ್ತುತ, ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇನೆ. ಹೀಗಾಗಿ, ಟಿ20ಗೆ ಗುಡ್​ಬೈ ಹೇಳ್ತಿರುವೆ. 2026ರ ಟಿ20 ವಿಶ್ವಕಪ್​ಗೆ ಆಯ್ಕೆಗಾರರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಯುವ ಆಟಗಾರರಿಗೂ ಅವಕಾಶ ಸಿಗಲಿ" ಎಂದು ಸ್ಟಾರ್ಕ್​ ಆಶಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net