ಬೆಳಗ್ಗೆ ಹೊತ್ತು ನೆನೆಸಿಟ್ಟ ಅಂಜೂರ ತಿಂತೀರಾ? ಹಾಗಿದ್ರೆ, ಈ ವಿಷಯಗಳು ನಿಮಗೆ ಗೊತ್ತಿರಲಿ | Soaked Figs

ವಿಜಯವಾಣಿ (15)
Published on

Soaked Figs: ಅತ್ಯಂತ ದುಬಾರಿ ಡ್ರೈಫ್ರೂಟ್ಸ್​ಗಳ ಪೈಕಿ ಅಂಜೂರ ಕೂಡ ಒಂದು. ಇದು ಸಿರಿವಂತರು ಮತ್ತು ಅಧಿಕ ಸಂಬಳ ಹೊಂದಿರುವ ಮಂದಿಗೆ ಸರಿಹೊಂದುವ ಒಣ ಹಣ್ಣು. ಹೇರಳ ಪೋಷಕಾಂಶಗಳನ್ನು ತುಂಬಿಕೊಂಡಿರುವ ಅಂಜೂರದಲ್ಲಿ, ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳಿವೆ. ಇತ್ತೀಚಿನ ದಿನಗಳಲ್ಲಿ, ಅನೇಕರು ತಮ್ಮ ಉತ್ತಮ ಆರೋಗ್ಯಕ್ಕಾಗಿ ಸೇವಿಸುತ್ತಿರುವ ಒಣ ಹಣ್ಣುಗಳಲ್ಲಿ ಒಂದು. ಇದಲ್ಲದೆ, ಆಯುರ್ವೇದ ಮತ್ತು ಯುನಾನಿ ಔಷಧದಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಅನೇಕ ತಜ್ಞರು, ಈ ಹಣ್ಣನ್ನು ತಿನ್ನಲು ಸಲಹೆ ಮಾಡುತ್ತಾರೆ. ಅಂಜೂರದ ಹಣ್ಣು ಆರೋಗ್ಯದ ಭಾಗ. ಆದಾಗ್ಯೂ, ಅನೇಕರಿಗೆ ಈ ಹಣ್ಣು ಮತ್ತು ಅದು ಒದಗಿಸುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಅದರಲ್ಲೂ, ರಾತ್ರಿ ವೇಳೆ ನೆನೆಸಿಟ್ಟು, ಬೆಳಗ್ಗೆ ಸಮಯದಲ್ಲಿ ಸೇವಿಸುವ ಅಂಜೂರದ ಬಗ್ಗೆ ನೀವು ತಿಳಿಯಬೇಕಾದ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ ಗಮನಿಸಿ.

ನೆನೆಸಿದ ಅಂಜೂರದಲ್ಲಿ ಏನೆಲ್ಲ ಪೋಷಕಾಂಶ?

  • ಆಹಾರದ ನಾರು
  • ವಿಟಮಿನ್ ಎ, ಬಿ1, ಬಿ2
  • ಕ್ಯಾಲ್ಸಿಯಂ
  • ಮೆಗ್ನೀಸಿಯಂ
  • ಕಬ್ಬಿಣಾಂಶ
  • ಪೊಟ್ಯಾಸಿಯಂ
  • ಉತ್ಕರ್ಷಣ ನಿರೋಧಕಗಳು
  • ನೈಸರ್ಗಿಕ ಸಕ್ಕರೆ

ಅಂಜೂರ ಸೇವನೆಯಿಂದ ಆರೋಗ್ಯ ಪ್ರಯೋಜನಗಳಿವು

1. ಸಕ್ಕರೆ ಮಟ್ಟ ಕಂಟ್ರೋಲ್​

ಅಂಜೂರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಕಾರಣ, ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ. ನಾರಿನಂಶದಿಂದ ಸಮೃದ್ಧವಾಗಿರುವುದರಿಂದ ಇದು ಮಧುಮೇಹವನ್ನು ಹತೋಟಿಗೆ ತರುವಲ್ಲಿ ಸಹಾಯ ಮಾಡುತ್ತದೆ.

2. ಜೀರ್ಣಕ್ರಿಯೆ ಸುಧಾರಣೆ

ಅಂಜೂರವು ನಾರಿನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜತೆಗೆ ಮಲಬದ್ಧತೆಯಿಂದ ದೂರವಿಡುತ್ತದೆ. ಈ ಹಣ್ಣನ್ನು ನೈಸರ್ಗಿಕ ಪರಿಹಾರವೆಂದು ಪರಿಗಣಿಸಬಹುದಾಗಿದೆ.

3. ಹೃದಯದ ಆರೋಗ್ಯ

ಅಂಜೂರದಲ್ಲಿರುವ ಪೊಟ್ಯಾಸಿಯಂ ಮತ್ತು ಉತ್ಕರ್ಷಣ ನಿರೋಧಕಗಳು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.

4. ಮಿದುಳಿನ ಆರೋಗ್ಯ

ಅಂಜೂರದಲ್ಲಿರುವ ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ನಮ್ಮ ಮಿದುಳಿನ ಕಾರ್ಯವನ್ನು ಸುಧಾರಿಸುತ್ತದೆ. ನೆನೆಸಿಟ್ಟ ಅಂಜೂರವನ್ನು ಬೆಳಗ್ಗೆ ಸಮಯದಲ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ, ನೆನಪಿನ ಶಕ್ತಿಯ ಮಟ್ಟಗಳು ಹೆಚ್ಚಾಗುತ್ತವೆ ಮತ್ತು ಒತ್ತಡ ನಿಯಂತ್ರಣಗೊಳ್ಳುತ್ತದೆ.

5. ರಕ್ತಹೀನತೆ ತಡೆಗಟ್ಟುವಿಕೆ

ಅಂಜೂರದಲ್ಲಿರುವ ನೈಸರ್ಗಿಕ ಕಬ್ಬಿಣವು, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮಹಿಳೆಯರಿಗೆ ವಿಶೇಷವಾಗಿ ಪ್ರಯೋಜನಕಾರಿ.

6. ಮೂಳೆ ಆರೋಗ್ಯ ಬಲ

ಅಂಜೂರದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನಂತಹ ಖನಿಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ 2ರಿಂದ 3 ನೆನೆಸಿದ ಅಂಜೂರವನ್ನು ತಿನ್ನುವುದು ಮೂಳೆಯನ್ನು ಬಲಪಡಿಸುತ್ತದೆ.

ಮುನ್ನೆಚ್ಚರಿಕೆಗಳೇನು?

  • ಮಿತವಾಗಿ ತೆಗೆದುಕೊಳ್ಳಿ
  • ದಿನಕ್ಕೆ 2-3 ಹಣ್ಣು
  • ಅತಿಯಾದ ಸೇವನೆಯಿಂದ ಅತಿಸಾರ ಉಂಟಾಗಬಹುದು.
  • ಮಧುಮೇಹ ಇರುವವರು ವೈದ್ಯರ ಸಲಹೆಯ ಮೇರೆಗೆ ಸೇವಿಸುವುದು ಬಹಳ ಉತ್ತಮ
  • ಅಲರ್ಜಿ ಇರುವವರು ಜಾಗರೂಕರಾಗಿರಿ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net