

ನವದೆಹಲಿ: ಆಶ್ಚರ್ಯಕರ ಘಟನೆಯೊಂದರಲ್ಲಿ ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ಯುವತಿಯೊಬ್ಬಳು ಗುಹೆಯೊಂದರಲ್ಲಿ ಸರ್ಪ ರೂಪದಲ್ಲಿ ಕಾಣಿಸಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಯುವತಿಯು ಉತ್ತರಪ್ರದೇಶದವಳಾಗಿದ್ದು, ಮೂರು ತಿಂಗಳ ಹಿಂದೆ ಕಣ್ಮರೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿರುವ ರಾಣಿದಿಹ್ ಗುಪ್ತ ಗುಹೆಯ ಬಳಿ ಯುವತಿ ಹಾವಿನ ರೂಪದಲ್ಲಿ ಕಾಣಿಸಿಕೊಂಡಿದ್ದು, ಈಕೆಯನ್ನು ಕಂಡ ಸ್ಥಳೀಯರು ಕೂಡಲೇ ಪೂಜೆ ಮಾಡಲು ಶುರು ಮಾಡಿದ್ದಾರೆ. ವಿಚಾರ ತಿಳಿದ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಯುವತಿಯನ್ನು ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಕೋನೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಸಿದ್ಧ ಶಿವನ ದೇವಸ್ಥಾನದ ಪಕ್ಕದಲ್ಲಿರುವ ಈ ಗುಹೆಯ ಬಳಿ ಯುವತಿಯೊಬ್ಬಳು ನೆಲದ ಮೇಲೆ ಹಾವಿನಂತೆ ಮಲಗಿದ್ದು, ಹಾವಿನ ರೀತಿ ಆಡಲು ಶುರು ಮಾಡುತ್ತಾಳೆ. ಯುವತಿಯನ್ನು ನೋಡಿದ ಕೆಲವರು ಆಕೆಯನ್ನು ಹೊರಗೆ ಕರೆದೊಯ್ದು ಪೂಜೆ ಮಾಡಿದರೆ. ಕೆಲವರು ಗಾಬರಿಯಾಗಿ ಓಡಿಹೋಗಿದ್ದಾರೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಹಾಕಿರುವ ನೆಟ್ಟಿಗರು ಈ ರೀತಿ ನೀವು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಕಮೆಂಟ್ ಹಾಕಿದರೆ. ನಾಗಿನ್ ಧಾರವಾಹಿಯ ಮುಂದಿನ ಆವೃತ್ತಿಯನ್ನು ಜಾರ್ಖಂಡ್ನಲ್ಲಿ ಚಿತ್ರೀಕರಿಸಲಾಗುವುದು ಎಂದು ಕಮೆಂಟ್ ಹಾಕಿದ್ದಾರೆ. ಯುವತಿಯ ಈ ನಡವಳಿಕೆ ಸಾವನ್ ತಿಂಗಳಿಗೆ ಹೋಲಿಸಿದ್ದು, ಸಾವನ್ ತಿಂಗಳು ಶಿವನ ಭಕ್ತರಿಗೆ ಮಂಗಳಕರ ಎಂದು ಹೇಳಲಾಗಿದೆ.