ಅಮೆರಿಕಾ: ಕೆಲವು ವರ್ಷಗಳ ನಂತರ ಮತ್ತೊಮ್ಮೆ ಟಾಲಿವುಡ್ ಅಂಗಳಕ್ಕೆ ‘ಮಿಸ್ ಶೆಟ್ಟಿ ಮತ್ತು ಮಿಸೆಸ್ ಪಾಲಿಶೆಟ್ಟಿ’ ಸಿನಿಮಾದ ಮೂಲಕ ಮರಳಿದ ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ, ಇದೀಗ ತಮ್ಮ ಹೊಸ ಚಿತ್ರದ ಮುಖೇನ ಸಿನಿಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಕಾರು ಮುಧೋಳ ನಗರದಲ್ಲಿ ಪತ್ತೆ: ಹಿಂದು ಕಾರ್ಯಕರ್ತ ಕಿರಣ್ ಸಿಸಿಬಿ ವಶಕ್ಕೆ
‘ಮಿಸ್ ಶೆಟ್ಟಿ ಮತ್ತು ಮಿಸೆಸ್ ಪಾಲಿಶೆಟ್ಟಿ’ ಬಿಡುಗಡೆಗೊಂಡ ಮೊದಲ ವಾರದಲ್ಲಿ ಯುಎಸ್ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿತ್ತು. ಇದೀಗ ಚಿತ್ರ ಅಮೆರಿಕಾ ಗಲ್ಲಾಪೆಟ್ಟಿಗೆಯಲ್ಲಿ ಅಧಿಕ ಮೊತ್ತದ ಕಲೆಕ್ಷನ್ ಮಾಡುವ ಮುಖೇನ ಮೊತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದೆ.
ನವೀನ್ ಪೋಲಿಶೆಟ್ಟಿ ಮತ್ತು ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರವು ಅಮೆರಿಕಾ ಗಲ್ಲಾಪೆಟ್ಟಿಗೆಯಲ್ಲಿ 1.5 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ ಎಂದು ಇತ್ತೀಚಿನ ವರದಿ ಮಾಹಿತಿ ನೀಡಿದೆ. ಈ ಮೂಲಕ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ: ಇದರ ವಿಶೇಷತೆಗಳೇನು?
ಮಹೇಶ್ ಬಾಬು .ಪಿ ನಿರ್ದೇಶನದ ಈ ಚಿತ್ರದಲ್ಲಿ ಜಯಸುಧಾ, ಮುರಳಿ ಶರ್ಮಾ, ಭದ್ರಂ, ಅಭಿನವ್ ಗೋಮತಮ್, ಸೋನಿಯಾ ದೀಪ್ತಿ, ತುಳಸಿ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).
‘ಗದರ್ 2’ ನೋಡಿ ‘ಹಿಂದುಸ್ತಾನ್ ಜಿಂದಾಬಾದ್’ ಎಂದ ವ್ಯಕ್ತಿ; ಹತ್ಯೆಗೈದ ಸ್ನೇಹಿತರು!