More

  ‘ಗದರ್ 2’ ನೋಡಿ ‘ಹಿಂದುಸ್ತಾನ್ ಜಿಂದಾಬಾದ್’ ಎಂದ ವ್ಯಕ್ತಿ; ಹತ್ಯೆಗೈದ ಸ್ನೇಹಿತರು!

  ರಾಯ್​ಪುರ, ಛತ್ತೀಸ್​ಗಢ: ಸನ್ನಿ ಡಿಯೋಲ್​ ನಟನೆಯ ‘ಗದರ್​ 2’ ಸಿನಿಮಾವನ್ನು ತನ್ನ ಮೊಬೈಲ್​ನಲ್ಲಿ ವೀಕ್ಷಣೆ ಮಾಡಿದ ವ್ಯಕ್ತಿಯೊಬ್ಬ, ಚಿತ್ರ ನೋಡಿದ ಬಳಿಕ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಮನಬಂದಂತೆ ಥಳಿಸಿದ ಸ್ನೇಹಿತರು, ಆತನನ್ನು ಹತ್ಯೆಗೈದ ಘಟನೆ ಛತ್ತೀಸ್​ಗಢದ, ರಾಯ್​ಪುರದಲ್ಲಿ ವರದಿಯಾಗಿದೆ.

  ಇದನ್ನೂ ಓದಿ: Success Story; ಹಾಲನ್ನು ಮಾರಾಟ ಮಾಡಿ ವರ್ಷಕ್ಕೆ ಕೋಟಿ.. ಕೋಟಿ ಹಣ ಸಂಪಾದನೆ ಮಾಡುವ 60 ವರ್ಷದ ಮಹಿಳೆ!

  ಛತ್ತೀಸ್‌ಗಢದ ಭಿಲಾಯ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಸದ್ಯ ಸ್ಥಳೀಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ್ದು, ಮೃತ ವ್ಯಕ್ತಿಯನ್ನು ಮಲ್ಕಿತ್ ಸಿಂಗ್ ಅಲಿಯಾಸ್ ವೀರು (30) ಎಂದು ಗುರುತಿಸಲಾಗಿದೆ. ಶುಕ್ರವಾರ (ಸೆಪ್ಟೆಂಬರ್ 15) ತನ್ನ ಮೊಬೈಲ್​ನಲ್ಲಿ ಗದರ್ 2 ಚಿತ್ರ ನೋಡಿ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಕ್ಕೆ, ಆತನ ಸ್ನೇಹಿತರೇ ಅವನನ್ನು ಕೊಲೆ ಮಾಡಿದ್ದಾರೆ.

  ಸ್ಥಳೀಯ ವರದಿಗಳ ಪ್ರಕಾರ, ವೀರು ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ತಸವ್ವೂರು, ಫೈಝಲ್, ಶುಭಂ ಲಹರೆ ಮತ್ತು ತರುಣ್ ನಿಶಾದ್ ಎಂದು ಗುರುತಿಸಲಾಗಿದೆ. ಸದ್ಯ 5ನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ:  VIDEO | ಬೆಂಗಳೂರು ಏರ್ಪೋರ್ಟ್​​ನ ಹಾಡಿ ಹೊಗಳಿದ ಸೌತ್ ಸ್ಟಾರ್ ಮಾಧವನ್!

  ಹತ್ಯೆಯಾದ ಮಲ್ಕಿತ್ ತಂದೆ ಖುರ್ಸಿಪರ್, ಕುಟುಂಬಸ್ಥರು ಮತ್ತು ಸಿಖ್ ಸಮುದಾಯದ ಸದಸ್ಯರು ಘಟನೆ ತಿಳಿದ ಕೂಡಲೇ ಖುರ್ಸಿಪರ್ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಘಟನೆಯನ್ನು ಖಂಡಿಸಿದ ಕುಟುಂಬದ ಸದಸ್ಯರು, ರಾಷ್ಟ್ರೀಯ ಹೆದ್ದಾರಿ ತಡೆದು, 50 ಲಕ್ಷ ರೂ. ಪರಿಹಾರ ಮತ್ತು ಮಲ್ಕಿತ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).

  ರೂಬಿಕ್​ ಕ್ಯೂಬ್​ನಲ್ಲಿ ಅರಳಿತು ನರೇಂದ್ರ ಮೋದಿ ಭಾವಚಿತ್ರ; ಪ್ರಧಾನಿ ಜನ್ಮದಿನಕ್ಕೆ ಬಾಲಕನಿಂದ ವಿಶೇಷ ಶುಭಾಶಯ

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts