More

    ಭಿಕ್ಷೆ ಬೇಡುವ ಮಕ್ಕಳತ್ತ ತಿರುಗಿಯೂ ನೋಡದ ಶಾಹಿದ್ ಪತ್ನಿ… ಈ ರೀತಿ ಟ್ರೋಲ್‌ ಆಗುತ್ತೇನೆಂದು ಕನಸಿನಲ್ಲೂ ಊಹಿಸಿರಲಿಲ್ಲ!

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಸಿನಿಮಾಗಳಲ್ಲಿ ನಟಿಸದೇ ಇರಬಹುದು. ಆದರೆ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಮೀರಾ ತನ್ನ ಪತಿಯೊಂದಿಗೆ ಎಲ್ಲಾ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಭಾಗವಹಿಸುವುದನ್ನು ಕಾಣಬಹುದು. ಮೀರಾ ಅವರ ಫೋಟೋಗಳನ್ನು ಗಮನಿಸಿದಾಗ ಅವರು ಓರ್ವ ಪರ್​​​ಫೆಕ್ಟ್ ಹೌಸ್​​​ವೈಫ್ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಆದರೆ ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಅವರ ಪಾಸಿಟಿವ್ ಇಮೇಜ್​​​​​ಗೆ ಧಕ್ಕೆಯಾಗಿದೆ. ಈ ವಿಡಿಯೋ ನೋಡಿದ ಎಲ್ಲರೂ ಮೀರಾ ಮೇಲೆ ಕೋಪಗೊಂಡಿದ್ದಾರೆ.

    ದೊಡ್ಡ ತಪ್ಪು ಮಾಡಿದ ಮೀರಾ ರಜಪೂತ್
    ಸದ್ಯ ಮೀರಾ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಇಲ್ಲಸಲ್ಲದ ಕಾಮೆಂಟ್​​ಗಳನ್ನು ಎದುರಿಸುತ್ತಿದ್ದಾರೆ. ವಿನಾಕಾರಣ ತಾನು ಇಂಟರ್‌ನೆಟ್‌ನಲ್ಲಿ ಈ ರೀತಿ ಟ್ರೋಲ್‌ಗೆ ಆಗುತ್ತೇನೆ ಮತ್ತು ಎಲ್ಲರೂ ಇದ್ದಕ್ಕಿದ್ದಂತೆ ತನ್ನ ವಿರುದ್ಧ ತಿರುಗಿ ಬೀಳುತ್ತಾರೆಂದು ಆಕೆ ಎಂದೂ ಊಹಿಸಿರಲಿಲ್ಲ. ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಆ ವಿಡಿಯೋದಲ್ಲಿ ಅವರು ತಮ್ಮ ಕಾರಿನಿಂದ ಇಳಿಯುವುದನ್ನು ಕಾಣಬಹುದು. ಆಕೆ ತನ್ನ ಕಾರಿನಿಂದ ಹೊರಬಂದ ತಕ್ಷಣ, ಇಬ್ಬರು ಬಡ ಮಕ್ಕಳು ಆಕೆಯನ್ನು ಸುತ್ತುವರೆದು ಹಣ ಕೇಳಲು ಪ್ರಾರಂಭಿಸುತ್ತಾರೆ. ಆಗ ಮೀರಾ ರಜಪೂತ್ ಆ ಮಕ್ಕಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತದೆ.

    ಸಹಾಯ ಮಾಡುವುದನ್ನು ಬಿಟ್ಟು, ಮೀರಾ ಈ ಮಕ್ಕಳತ್ತ ತಿರುಗಿಯೂ ನೋಡುವುದಿಲ್ಲ. ಈಗ ಮೀರಾ ರಜಪೂತ್ ಅವರ ಈ ವರ್ತನೆಯನ್ನು ಜನರು ಇಷ್ಟಪಡುತ್ತಿಲ್ಲ. ಈಕೆ ಬಡ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

    ಈ ವಿಡಿಯೋ ನೋಡಿದ ಬಳಕೆದಾರರು ಮೀರಾ ಅವರನ್ನು ಟ್ರೋಲ್ ಮಾಡಿ, ‘ಈ ಜನರು ಹೇಗಿದ್ದಾರೆಂದು ಇದು ತೋರಿಸುತ್ತದೆ’, ‘ಆಕೆಯ ಬಳಿ ನಗದು ಇಲ್ಲದಿರಬಹುದು, ಆದರೆ ಕನಿಷ್ಠ ಆ ಮಕ್ಕಳನ್ನು ನಗುವಂತೆ ಮಾಡಬಹುದಿತ್ತು ಅಥವಾ ಒಮ್ಮೆ ಹಿಂತಿರುಗಿ ನೋಡಬಹುದಿತ್ತು’, ‘ದಯೆ ಎಲ್ಲಿದೆ? ಆಕೆ ಇಲ್ಲಿ ಲೇಡಿ ಕಬೀರ್ ಸಿಂಗ್’, ‘ಈ ಹುಡುಗಿ ಈ ಮಗುವಿಗಿಂತ ಬಡವಳು’, ‘ಶ್ರೀಮಂತರಿಗೆ ಚಿಕ್ಕ ಹೃದಯವಿದೆ’. ‘ಎಂಥಹ ಹೆಂಗಸು, ಆ ಬಡ ಮಕ್ಕಳಿಗೆ ಏನಾದರೂ ಕೊಟ್ಟಿದ್ದರೆ ಅವಳಿಗೆ ಏನಾದರೂ ಕೊರತೆಯಾಗುತ್ತಿತ್ತೇ? ಏಕೆ ಹೆಮ್ಮೆಪಡಬೇಕು?’ ಎಂದೆಲ್ಲಾ ಕಿಡಿಕಾರಿದ್ದಾರೆ. 

    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಪಾಕ್ ಮಾಜಿ ಸ್ಪಿನ್ನರ್ ಟ್ವೀಟ್ ವೈರಲ್

    ಭದ್ರಕೋಟೆಯಾಗಿ ಮಾರ್ಪಟ್ಟ ಬ್ಯಾಂಕ್ವೆಟ್ ಹಾಲ್; ಪೊಲೀಸ್ ಕಾವಲಿನಲ್ಲಿ ನಡೆದ ಲೇಡಿ ಡಾನ್ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts