More

    ಭದ್ರಕೋಟೆಯಾಗಿ ಮಾರ್ಪಟ್ಟ ಬ್ಯಾಂಕ್ವೆಟ್ ಹಾಲ್; ಪೊಲೀಸ್ ಕಾವಲಿನಲ್ಲಿ ನಡೆದ ಲೇಡಿ ಡಾನ್ ಮದುವೆ

    ನವದೆಹಲಿ: ಮಂಗಳವಾರ ದೆಹಲಿಯಲ್ಲಿ ವಿಶಿಷ್ಟ ವಿವಾಹ ನಡೆಯುತ್ತಿದೆ. ಬಹುಶಃ ಜೈಲು ಕೈದಿಯೊಬ್ಬ ಕುಖ್ಯಾತ ಲೇಡಿ ಡಾನ್‌ನನ್ನು ಮದುವೆಯಾಗುತ್ತಿರುವುದು ಇದೇ ಮೊದಲು. ಈ ಮದುವೆಗಾಗಿ ಕೈದಿಗೆ ಪೆರೋಲ್ ಕೂಡ ಸಿಕ್ಕಿದೆ. ಮದುವೆಯಾಗುತ್ತಿರುವ ಆ ವಧು-ವರರ ಹೆಸರು ಕಲಾ ಜತೇಡಿ ಮತ್ತು ಅನುರಾಧಾ ಚೌಧರಿ. ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್ವೆಟ್ ಹಾಲ್ ಚಿಕ್ಕ ಹುಳು ಕೂಡ ತೂರಲಾಗದಷ್ಟು ಭದ್ರಕೋಟೆಯಾಗಿ ಮಾರ್ಪಾಡಾಗಿದೆ.

    ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಲಾ ಜತೇಡಿ ಮತ್ತು ಲೇಡಿ ಡಾನ್ ಅನುರಾಧಾ ಚೌಧರಿ ಅಲಿಯಾಸ್ ಮೇಡಮ್ ಮಿಂಜ್ ಇಂದು ದೆಹಲಿಯ ದ್ವಾರಕಾದಲ್ಲಿರುವ ಸಂತೋಷ್ ಪ್ಯಾಲೇಸ್‌ನಲ್ಲಿ ವಿವಾಹವಾಗಲಿದ್ದಾರೆ. ಇದಕ್ಕಾಗಿ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ಪೊಲೀಸರು ಕಟ್ಟೆಚರ ವಹಿಸಿದ್ದಾರೆ. ‘ಲೇಡಿ ಡಾನ್’ ಅನುರಾಧ ತಾವೇ ಡ್ರೈವ್ ಮಾಡಿಕೊಂಡು ಬ್ಯಾಂಕ್ವೆಟ್ ಹಾಲ್ ತಲುಪಿದ್ದಾರೆ. ಮದುವೆಯ ಡ್ರೆಸ್ ಧರಿಸಿ, ಕಪ್ಪು ಕಾರಿನಲ್ಲಿ ಮದುವೆಗೆ ಆಗಮಿಸಿದ್ದರು.

    ಅತಿಥಿ ಪ್ರವೇಶಕ್ಕಾಗಿ ಬಾರ್ಕೋಡ್
    ಅತಿಥಿಗಳ ಪ್ರವೇಶಕ್ಕಾಗಿ ಎರಡು ಲೋಹ ಶೋಧಕ ಯಂತ್ರ ಅಳವಡಿಸಲಾಗಿದೆ. ಈ ಲೋಹ ಶೋಧಕಗಳನ್ನು ಹಾದು ಎಲ್ಲರೂ ಒಳಗೆ ಹೋಗುವುದು ಅವಶ್ಯಕ. ಇಲ್ಲಿಗೆ ಬರುವ ಪ್ರತಿಯೊಬ್ಬ ಅತಿಥಿಗೂ ಒಂದು ಬಾರ್ಕೋಡ್ ನೀಡಲಾಗಿದೆ, ಅದನ್ನು ಸ್ಕ್ಯಾನ್ ಮಾಡಿದ ನಂತರವೇ ಮದುವೆ ಮಂಟಪಕ್ಕೆ ಪ್ರವೇಶ ಸಾಧ್ಯ. ಮದುವೆ ಸ್ಥಳದಲ್ಲಿ ಭದ್ರತಾ ಸಂಸ್ಥೆಯ ಸಿಬ್ಬಂದಿಯೂ ಹಾಜರಿರುತ್ತಾರೆ.

    ಈ ಮದುವೆಗೆ ಎರಡೂ ಕಡೆಯ ಕುಟುಂಬದ ಅತಿಥಿಗಳು ಆಗಮಿಸಲಿದ್ದಾರೆ. ಬ್ಯಾಂಕ್ವೆಟ್ ಹಾಲ್‌ನಲ್ಲಿರುವ ಸಿಬ್ಬಂದಿ ಸಂಖ್ಯೆ 20. ಈ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಇದಲ್ಲದೆ, ಈ ಸಭಾಂಗಣದಲ್ಲಿ ಬಳಿ ಇರುವ ಪ್ರತಿಯೊಂದು ಅಂಗಡಿಯನ್ನು ಮುಚ್ಚಲಾಗುವುದು.

    ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
    ಕಲಾ ಜತೇಡಿ ಮತ್ತು ಅನುರಾಧಾ ಚೌಧರಿ ಅವರ ಪ್ರೇಮಕಥೆ ಮೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. ಇಬ್ಬರೂ ಅಪರಾಧ ಎಸಗಿ ತಲೆಮರೆಸಿಕೊಂಡಿದ್ದರು. ಈ ವೇಳೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಹರಿದ್ವಾರದಲ್ಲಿ ರಹಸ್ಯವಾಗಿ ಮದುವೆಯಾದರು, ಆದರೆ ಈಗ ಅವರು ತಮ್ಮ ಮನೆಯವರ ಮುಂದೆ ಮದುವೆಯಾಗಲು ನಿರ್ಧರಿಸಿದ್ದಾರೆ. ಅನುರಾಧಾ ಚೌಧರಿ ಈಗಾಗಲೇ ಶಿಕ್ಷಣ ಪಡೆದಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಸಂದೀಪ್ ಮೇಲಿನ ಪ್ರೀತಿಗೆ ಆಕೆ ಎಲ್ ಎಲ್ ಬಿ ಓದಲು ಆರಂಭಿಸಿದ್ದಾರೆ. ಈಗ ಆಕೆಯೇ ಕಲಾ ಜತೇಡಿ ಪ್ರಕರಣವನ್ನು ನೋಡಿಕೊಳ್ಳುತ್ತಾಳಂತೆ.

    ಕಲಾ ಜತೇಡಿ ಯಾರು?
    ಕಲಾ ಜತೇಡಿ ಹರಿಯಾಣದ ಸೋನಿಪತ್ ಜಿಲ್ಲೆಯ ಕಲಾ ಜತೇಡಿ ಗ್ರಾಮದ ನಿವಾಸಿ. ಕಳೆದ 15-16 ವರ್ಷಗಳ ಕಾಲ ಅಪರಾಧ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾನೆ. ಕೊಲೆ, ಅಪಹರಣ, ದರೋಡೆ, ಸುಲಿಗೆ, ಭೂಕಬಳಿಕೆ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಲಾ ಜತೇಡಿ ಅವರ ಗ್ಯಾಂಗ್‌ನಲ್ಲಿ ನೂರಾರು ಶೂಟರ್‌ಗಳು ಭಾಗಿಯಾಗಿದ್ದಾರೆ. ಕಲಾ ಜತೇಡಿ 12ನೇ ತರಗತಿ ತೇರ್ಗಡೆಯಾಗಿದ್ದಾನೆ. ಮೊದಲು ಕೇಬಲ್ ಆಪರೇಟರ್ ಆಗಿ ಕೆಲಸ ಮಾಡಿದನು. ಆ ನಂತರವೇ ಅಪರಾಧ ಪ್ರಪಂಚದ ಕಡೆಗೆ ತಿರುಗಿದನು. ಕಲಾ ಜತೇಡಿಯನ್ನು ಜುಲೈ 30, 2021 ರಂದು ಉತ್ತರ ಪ್ರದೇಶದ ಸಹರಾನ್‌ಪುರದಿಂದ ಬಂಧಿಸಲಾಯಿತು. ಇವನೊಂದಿಗೆ ಗೆಳತಿ ಲೇಡಿ ಡಾನ್ ಅನುರಾಧಾಳನ್ನೂ ಬಂಧಿಸಲಾಗಿತ್ತು.

    ಲೇಡಿ ಡಾನ್ ಮದ್ವೆಯಾಗಲು ಗ್ಯಾಂಗ್​ಸ್ಟರ್​ಗೆ ಪೆರೋಲ್​ ನೀಡಿದ ಕೋರ್ಟ್: ಇಬ್ಬರ ಲವ್​ ಸ್ಟೋರಿಯೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts