More

    ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಯುಕ್ತ ಗೆಲ್ಲಿಸಿ

    ತೇರದಾಳ: ನನಗೂ-ದೇಸಾಯಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದೇವಲ ಅವರು ಬಹಳಷ್ಟು ಸಹಕಾರ ನೀಡಿದ್ದಾರೆ. ಅವರ ಸಂಬಂಧವು ಈಗ ರಾಜಕೀಯ ಸಹಕಾರಕ್ಕೂ ಒಂದುಗೂಡಿರುವುದು ಈ ಭಾಗದಲ್ಲಿ ಮತ್ತಷ್ಟು ಹುರುಪು ತುಂಬಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

    ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಂಯುಕ್ತ ಪಾಟೀಲ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸದಾ ದೆಹಲಿಗೆ ತಮ್ಮ ವಿಚಾರಗಳನ್ನು ಕರೆದೊಯ್ಯುವ ಕೆಲಸ ಮಾಡುವ ಮೂಲಕ ಈ ಭಾಗದ ರೈತರು, ಕಾರ್ಮಿಕರು, ನೇಕಾರರು ಸೇರಿ ವಿವಿಧ ವಲಯಗಳ ಅಭಿವೃದ್ಧಿಗಾಗಿ ಅವರು ಶ್ರಮಿಸಲಿದ್ದಾರೆ. ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

    ದೇವಲ ಪುತ್ರ ಕಿರಣ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಶಾಸಕರ (ಸಿದ್ದು ಸವದಿ) ಅವರ ದುರಾಡಳಿತಕ್ಕೆ ಬೇಸತ್ತಿದ್ದೇವೆ. ವೈಯಕ್ತಿಕ ವರ್ಚಸ್ಸಿಗಾಗಿ ಕಾರ್ಯಕರ್ತರನ್ನು ಕಡೆಗಣಿಸುವ ಪ್ರವೃತ್ತಿ ಅವರದ್ದಾಗಿದೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂಥಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸಂಯುಕ್ತ ಗೆಲುವಿಗಾಗಿ ಅವಿರತವಾಗಿ ಶ್ರಮಿಸುತ್ತೇವೆ ಎಂದರು.

    ದೇವಲ ದೇಸಾಯಿ ಅವರ ಬೆಂಬಲಿಗ ಮತ್ತು ಹಳಿಂಗಳಿ ಸೇರಿ ತಮದಡ್ಡಿ, ತೇರದಾಳ, ಗೋಲಬಾಂವಿ, ಹನಗಂಡಿ ಇನ್ನಿತರ ಗ್ರಾಮ ನಗರಗಳ ನೂರಕ್ಕೂ ಅಧಿಕ ಜನರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

    ಮುಖಂಡ ಸಿದ್ದು ಕೊಣ್ಣೂರ ಮಾತನಾಡಿದರು. ಲಕ್ಷ್ಮಣ ದೇಸಾರಟ್ಟಿ, ಅಶೋಕ ಅಂಗಡಿ, ಮಹೇಂದ್ರಗೌಡ ಪಾಟೀಲ, ದಸ್ತಗೀರ ಮಿರಗನ್ನವರ, ಅಜೀತ್ ಮಗದುಮ್, ಚನ್ನಪ್ಪ ಮಾದಿಗೊಂಡ, ಬಸಪ್ಪ ಕಮಲದಿನ್ನಿ ಪರಿವಾರ, ಲಕ್ಕಪ್ಪ ಕರೆನ್ನವರ, ಭರಮಪ್ಪ ಆಲಗೂರ, ಶ್ರೀಕಾಂತ ಘೂಳ್ಳನ್ನವರ ಇತರರಿದ್ದರು. ಉದಯ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts