

ಧೋಲ್ಪುರ: ಮದುವೆಗಾಗಿ ಏಳು ವರ್ಷದ ಬಾಲಕಿಯನ್ನು ತಂದೆಯೇ ಮಾರಾಟ ಮಾಡಿರುವ ವಿಚಿತ್ರ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಮೇನಿಯಾ ಪ್ರದೇಶದಲ್ಲಿ ನಡೆದಿದೆ.
38ರ ಹರೆಯದ ಭೂಪಾಲ್ ಸಿಂಗ್ ಬಾಲಕಿಯ ತಂದೆಗೆ 4.50 ಲಕ್ಷ ರೂ.ನೀಡಿ, ಬಾಲಕಿಯನ್ನು ಖರೀದಿಸಿ ಬಾಲ್ಯ ವಿವಾಹ ಮಾಡಿಕೊಂಡಿದ್ದ. ವಿಷಯವನ್ನು ತಿಳಿದ ಪೊಲೀಸರು ಕೂಡಲೇ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ನಂತರ ಮಾತನಾಡಿದ ಪೊಲೀಸರು, ನವ ವಧುವಿನಂತೆ ಶೃಂಗಾರ ಮಾಡಿಕೊಂಡಿದ್ದ ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿ ವಿರುದ್ಧ ಮಾನವ ಕಳ್ಳಸಾಗಣೆ, ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)