More

    ಇಟಾಲಿಯನ್​ ನಟನಿಗೆ ಗಾಳ ಹಾಕಿದ ಕರಣ್​ ಜೋಹರ್​

    ಮುಂಬೈ: ಹಾಲಿವುಡ್​ ಅಥವಾ ಬೇರೆ ದೇಶಗಳ ನಟರನ್ನು ಬಾಲಿವುಡ್​ನತ್ತ ಸೆಳೆಯುವ ಪ್ರಯತ್ನ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಈ ಹಿಂದೆ ‘ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದಲ್ಲಿ ನಟಿಸುವುದಕ್ಕೆ ಹಾಲಿವುಡ್​ ನಟ ಕಿಯೆನು ರೀವ್ಸ್​ ಅವರಿಗೆ ಆಫರ್​ ನೀಡಲಾಗಿತ್ತಂತೆ. ಯಾವಾಗ ರೀವ್ಸ್​ ನೋ ಎಂದರೋ, ಆಗ ಶಾರೂಖ್​ ಖಾನ್​ ಅವರನ್ನು ಆ ಪಾತ್ರ ನೀಡಲಾಯಿತಂತೆ.

    ಇದನ್ನೂ ಓದಿ: ಬಾಲಿವುಡ್​ ಮಂದಿ ಕಿರುಕುಳ ಕೊಟ್ಟರೆ ದೇಶ ಬಿಡುತ್ತಾರಂತೆ ಕೆಆರ್​ಕೆ

    ಈಗ್ಯಾಕೆ ಈ ವಿಷಯವೆಂದರೆ, ಇದೀಗ ಮತ್ತೊಬ್ಬ ವಿದೇಶಿ ನಟನನ್ನು ಬಾಲಿವುಡ್​ಗೆ ಕರೆತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಕರಣ್​ ಜೋಹರ್​. ಕಳೆದ ವರ್ಷ ಬಿಡುಗಡೆಯಾದ ರೊಮ್ಯಾಂಟಿಕ್​ ಚಿತ್ರ ‘365 ಡೇಸ್​’ನಲ್ಲಿ ನಟಿಸಿದ್ದ ಮಿಚೆಲ್​ ಮೊರ್ರೋನ್​ ಅವರನ್ನು ಕರಣ್​ ಸಂಪರ್ಕ ಮಾಡಿದ್ದು, ತಮ್ಮ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸುವಂತೆ ಆಫರ್​ ಕೊಟ್ಟಿದ್ದಾರಂತೆ.

    ‘365 ಡೇಸ್​’ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಂತರ ಮಿಚೆಲ್​ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹೆಚ್ಚಾಗಿದ್ದು, ಅದರಲ್ಲೂ ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರಂತೆ. ಮಿಚೆಲ್​ ಅವರ ಜನಪ್ರಿಯತೆಯನ್ನು ಎನ್​ಕ್ಯಾಶ್​ ಮಾಡಿಕೊಳ್ಳುವುದು ಕರಣ್​ ಅವರ ಐಡಿಯಾ. ಅದೇ ಕಾರಣಕ್ಕೆ, ತಮ್ಮ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ಅವರಿಗೆ ಆಫರ್​ ನೀಡಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಮತ್ತೆ ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಾಮ್​ಗೋಪಾಲ್ ವರ್ಮಾ!

    ಬರೀ ಕರಣ್ ಮಾತ್ರವಲ್ಲ, ಬಾಲಿವುಡ್​ನ ಇನ್ನೂ ಕೆಲವು ಜನಪ್ರಿಯ ನಿರ್ಮಾಪಕ-ನಿರ್ದೇಶಕರು, ಮಿಚೆಲ್​ ಹಿಂದೆ ಬಿದ್ದಿದ್ದಾರಂತೆ. ಆದರೆ, ಸದ್ಯಕ್ಕೆ ಆತ ಯಾರಿಗೂ ಗ್ರೀನ್​ ಸಿಗ್ನಲ್​ ನೀಡಿಲ್ಲ. ನಿಜಕ್ಕೂ ಮಿಚೆಲ್​, ಭಾರತೀಯ ಚಿತ್ರಗಳಲ್ಲಿ ನಟಿಸುತ್ತಾರಾ ಎಂಬುದು ಕಾದು ನೋಡಬೇಕಿದೆ.

    ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts