ಮತ್ತೆ ಅಮಿತಾಭ್ ಬಚ್ಚನ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಾಮ್​ಗೋಪಾಲ್ ವರ್ಮಾ!

Ram
Published on

ಹೈದರಾಬಾದ್: ಟಾಲಿವುಡ್​ನಲ್ಲಿ ಹೆಚ್ಚು ಸಕ್ರಿಯರಾಗಿರುವ ನಿರ್ದೇಶಕ ರಾಮ್​ಗೋಪಾಲ್ ವರ್ಮಾ, ಮತ್ತೆ ಬಾಲಿವುಡ್​ನತ್ತ ಮುಖ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಅದರ ಘೋಷಣೆಯೂ ಆಗಲಿದೆ. ಹಾಗಾದರೆ, ಆರ್​ಜಿವಿ ಯಾರಿಗೆ ನಿರ್ದೇಶನ ಮಾಡಲಿದ್ದಾರೆ? ಸದ್ಯದ ಮಾಹಿತಿ ಪ್ರಕಾರ ಬಿಗ್​ಬಿ ಅಮಿತಾಬ್ ಬಚ್ಚನ್​ಗೆ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಹೌದು, ಹೀಗೊಂದು ಸುದ್ದಿ ಸದ್ಯ ತೆಲುಗು ನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಥೆ ಬರೆಯುವುದರಲ್ಲಿ ಆರ್​ಜಿವಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಸಿನಿಮಾದ ಒಂದೆಳೆಯನ್ನೂ ಅಮಿತಾಭ್​ ಅವರಿಗೂ ಹೇಳಿದ್ದು, ಅವರಿಂದಲೂ ಒಪ್ಪಿಗೆ ಪಡೆದುಕೊಂಡಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ, 2022ರಲ್ಲಿ ಚಿತ್ರ ಸೆಟ್ಟೇರಲಿದೆಯಂತೆ.

ಅಂದಹಾಗೆ, ಆರ್​ಜಿವಿ ನಿರ್ದೇಶನದ ಸಾಲು ಸಾಲು ಸಿನಿಮಾಗಳಲ್ಲಿ ಅಮಿತಾಭ್ ನಟಿಸಿದ್ದಾರೆ. ಸರ್ಕಾರ್, ನಿಶ್ಯಬ್ಧ, ರಣ್​, ಆಗ್, ಡಿಪಾರ್ಟ್​ಮೆಂಟ್​ ಸೇರಿ ಹಲವು ಚಿತ್ರಗಳಲ್ಲಿ ಅಮಿತಾಭ್​ ನಟಿಸಿದ್ದಾರೆ. ಇದೀಗ ಮತ್ತೆ ಅಮಿತಾಭ್​ ಜತೆ ಕೈ ಜೋಡಿಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net