ತ್ರಿಮೂರ್ತಿ ಚಿತ್ರದ ಖ್ಯಾತಿಯ ನಟಿ ಇನ್ನಿಲ್ಲ: ಡಾ.ರಾಜ್‌ ಜತೆ ಆರು ಚಿತ್ರಗಳಲ್ಲಿ ನಟಿಸಿರುವ ತಾರೆ ಇವರು...

surekha
Published on

ಬೆಂಗಳೂರು: ಡಾ,ರಾಜ್‌ಕುಮಾರ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ನಾಯಕರ ಜತೆ ನಟಿಸಿದ್ದ ನಟಿ ಸುರೇಶ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ 66 ವರ್ಷ ವಯಸ್ಸಾಗಿತ್ತು.
160ಕ್ಕೂ ಅಧಿಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಇಂದು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

ತ್ರಿಮೂರ್ತಿ ಸಿನಿಮಾ 1975 ಬಿಡುಗಡೆಯಾಗಿತ್ತು. ಸಿವಿ ರಾಜೇಂದ್ರ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಜಿ.ಕೆ. ವೆಂಕಟೇಶ್ ಸಂಗೀತ ಒದಗಿಸಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾ ನಿರ್ಮಿಸಿದ್ದರು. ಅಲ್ಲಿಂದ ಸುರೇಖಾ ಬಹುಖ್ಯಾತಿ ಗಳಿಸಿದ್ದರು.

ಇದಿಷ್ಟೇ ಅಲ್ಲದೇ, ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಸೇರಿದಂತೆ ಹಲವು ಪ್ರಸಿದ್ಧ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟವರು ಇವರು. ಸುರೇಖಾ ಸೆನ್ಸಾರ್ ಬೋರ್ಡ್ ಸದಸ್ಯೆ ಹಾಗೂ ಸ್ಟೇಟ್ ಅವಾರ್ಡ್ ಕಮಿಟಿಯ ಸದಸ್ಯೆಯಾಗಿದ್ದರು. ಇವರಿಗೆ ಶಾರದಾ ಎಂಬ ಸಹೋದರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net