More

    ಅತ್ತ ದೇಹಗಳು ಪೀಸ್‌ಪೀಸ್‌- ಇತ್ತ ಬೆಂಗಳೂರು ಮಹಿಳೆಯರಿಂದ ವಿಶೇಷ ಪೂಜೆ: ಎಲ್ಲವೂ ಕರೊನಾಕ್ಕಾಗಿ!

    ಬೆಂಗಳೂರು: ಕರೊನಾ ಮಹಾಮಾರಿಯನ್ನು ಹೊಡೆದೋಡಿಸಲು ವೈದ್ಯಕೀಯ ಕ್ಷೇತ್ರದ ತಜ್ಞರು ಒಂದೆಡೆ ಹರಸಾಹಸ ಪಡುತ್ತಿದ್ದರೆ, ಅದೇ ಇನ್ನೊಂದೆಡೆ ಪೂಜೆ, ಪುನಸ್ಕಾರದ ಮೊರೆ ಹೋಗಿದ್ದಾರೆ ಹಲವರು.
    ಇದಾಗಲೇ ಕೆಲವು ಹಳ್ಳಿಗಾಡು ಪ್ರದೇಶಗಳಲ್ಲಿ ಕರೊನಾ ದೇವಿಯನ್ನು ಸ್ಥಾಪಿಸಿ ಪೂಜೆಮಾಡಿಯಾಗಿದೆ, ಜತೆಗೆ ಕರೊನಾ ಹೋಗಿಸಲು ಹೋಮ ಹವನಗಳನ್ನೂ ನಡೆಸಲಾಗಿದೆ.

    ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಭಯಾನಕ ಎನ್ನುವಂಥ ಪೂಜೆ ಕರೊನಾದ ಸಲುವಾಗಿ ನಡೆದಿದೆ. ಇಂದು ಬೆಳ್ಳಂಬೆಳಗ್ಗೆನೇ ಕುರಿ ಕೋಳಿಗಳನ್ನು ಬಲಿಕೊಟ್ಟು ಪೂಜೆ ನಡೆಸಲಾಗಿದೆ.
    ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪಿಸಿ, ಬೀದಿಗಳಲ್ಲಿ ರಂಗೋಲಿ ಬಿಟ್ಟು ಆಚರಣೆ ಮಾಡಲಾಗಿದೆ.

    ನಂತರ ಮೂರು ಕಲ್ಲು ಸ್ಥಾಪನೆ ಮಾಡಿ ಪೂಜೆ ಮಾಡಿ, ಹರಕೆಗಾಗಿ ಕುರಿ, ಕೋಳಿಗಳನ್ನು ಅಸಂಖ್ಯ ಸಂಖ್ಯೆಯಲ್ಲಿ ಬಲಿಕೊಡಲಾಗಿದೆ. ಕರೊನಾ ಹೆಸರಿನಲ್ಲಿ ಬೀದಿ ಬೀದಿಗಳಲ್ಲಿ ರಕ್ತ ಚೆಲ್ಲಾಡಿದೆ. ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಮಹಿಳೆಯರು ಕರೊನಾ ತೊಲಗಿಸಲು ಪೂಜೆ ನೆರವೇರಿಸಿದರು!

    ಇಲ್ಲಿದೆ ನೋಡಿ ಅದರ ವಿಡಿಯೋ:

    ಫೇಸ್‌ಬುಕ್‌ ಲೈವ್‌ನಲ್ಲಿ ಇನ್ನೇನು ಪ್ರಾಣ ಹೋಗ್ತಿರುವಾಗಲೇ ರಕ್ಷಿಸಿದ್ದು 14 ಸಾವಿರ ಕಿಮೀ ದೂರದಲ್ಲಿ ಕುಳಿತವರು!

    ಕೋವಿಡ್‌ ಸಮಯದಲ್ಲೇ ಈ ನೌಕರರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ- ಸೇವೆ ಸ್ಥಗಿತಕ್ಕೆ ಆದೇಶ

    ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts