More

    ಫೇಸ್‌ಬುಕ್‌ ಲೈವ್‌ನಲ್ಲಿ ಇನ್ನೇನು ಪ್ರಾಣ ಹೋಗ್ತಿರುವಾಗಲೇ ರಕ್ಷಿಸಿದ್ದು 14 ಸಾವಿರ ಕಿಮೀ ದೂರದಲ್ಲಿ ಕುಳಿತವರು!

    ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬ ಫೇಸ್‌ಬುಕ್‌ ಲೈವ್‌ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಅಮೆರಿಕದಲ್ಲಿ ಕುಳಿತ ಅಧಿಕಾರಿಗಳು ರಕ್ಷಿಸಿದ ಅಪರೂಪದ ಘಟನೆ ನಡೆದಿದೆ.

    ಜೂನ್ 3 ರ ಮಧ್ಯರಾತ್ರಿಯ ವೇಳೆ ಸಮಾರು 39 ವರ್ಷದ ದೆಹಲಿಯ ವ್ಯಕ್ತಿ ಜೀವನದಲ್ಲಿ ಜುಗುಪ್ಸೆಗೊಂಡು ಫೇಸ್‌ಬುಕ್‌ ಲೈವ್‌ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಮಯದಲ್ಲಿ ಫೇಸ್‌ಬುಕ್‌ನ ಅಮೆರಿಕ ಕಚೇರಿಯಲ್ಲಿ ಕುಳಿತ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ನಂತರ ಕೂಡಲೇ ಈ ಬಗ್ಗೆ ದೆಹಲಿಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

    ಕೂಡಲೇ ಆ ವ್ಯಕ್ತಿಯ ವಿಳಾಸ ಪತ್ತೆ ಮಾಡಲಾಗಿದ್ದು, ವಿಡಿಯೋಗಳನ್ನು ಕೂಡಲೇ ದೆಹಲಿಯ ಪಾಲಂ ಪೊಲೀಸರಿಗೆ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಪಾಲಂ ಠಾಣೆಯ ಪಿಎಸ್‌ಐ ಅಮಿತ್ ಕುಮಾರ್ ಕೂಡಲೇ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆ ವೇಳೆಗಾಗಲೇ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗಿತ್ತು. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಏಮ್ಸ್‌ಗೆ ದಾಖಲು ಮಾಡಲಾಗಿದೆ.

    2016ರಲ್ಲಿ ಪತ್ನಿಯ ಮರಣದ ನಂತರ ಇವರು ತೀವ್ರ ಕುಗ್ಗಿಹೋಗಿದ್ದರು. ಇಬ್ಬರು ಚಿಕ್ಕಮಕ್ಕಳು ಇದ್ದಾರೆ. ಇದೇ ಸಮಯದಲ್ಲಿ ಕಳೆದ ವಾರ ನೆರೆಹೊರೆಯವರ ಜತೆ ಅದ್ಯಾವುದೋ ಕಾರಣಕ್ಕೆ ಜಗಳವಾಗಿದೆ. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರನ್ನು ರಕ್ಷಿಸಿರುವುದಾಗಿ ಫೇಸ್‌ಬುಕ್‌ ಹೇಳಿಕೊಂಡಿದೆ.

    ಕೋವಿಡ್‌ ಸಮಯದಲ್ಲೇ ಈ ನೌಕರರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ- ಸೇವೆ ಸ್ಥಗಿತಕ್ಕೆ ಆದೇಶ

    ವಿಚ್ಛೇದನಕ್ಕೆ ಅರ್ಜಿ ಹಾಕಿದ್ರೆ ಅವಳೇ ಪರಿಹಾರ ಕೊಡಬೇಕಾಗತ್ತೆ ಎಂದು ಸುಮ್ಮನಿದ್ದಾಳೆ ಪತ್ನಿ- ಹೀಗೂ ಕಾನೂನು ಇದ್ಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts