More

    ಕೋವಿಡ್‌ ಸಮಯದಲ್ಲೇ ಈ ನೌಕರರಿಗೆ ಬಿಗ್‌ ಶಾಕ್‌ ಕೊಟ್ಟ ಸರ್ಕಾರ- ಸೇವೆ ಸ್ಥಗಿತಕ್ಕೆ ಆದೇಶ

    ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಡೆಯುತ್ತಿದ್ದ ಇ-ಆಸ್ಪತ್ರೆಯ ಡೇಟಾ ಎಂಟ್ರಿ ಸಿಬ್ಬಂದಿ ವಜಾಕ್ಕೆ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಕೋವಿಡ್‌ ಸಮಯದಲ್ಲಿಯೇ ಇಂಥದ್ದೊಂದು ಆದೇಶ ಹೊರಡಿಸಿರುವುದರಿಂದ ಇದೀಗ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. 312 ಸಿಬ್ಬಂದಿ ಈ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಇವರ ಸೇವೆ ಸ್ಥಗಿತಗೊಳ್ಳಲಿದೆ.

    ಇವರೆಲ್ಲರೂ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಡಾಟಾ ಎಂಟ್ರಿ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿಡಿ ಪಿಡಿ, ಅಡ್ಮಿಶನ್, ಬಿಲ್ಲಿಂಗ್, ಡಿಸ್ಚಾರ್ಜ್ ಹಾಗೂ ಫಾರ್ಮಸಿ ಎಂಟ್ರಿ ಮಾಡುತ್ತಿದ್ದ ಸಿಬ್ಬಂದಿ ಇವರಾಗಿದ್ದಾರೆ.

    ಮೇ ಅಂತ್ಯದಲ್ಲಿಯೇ ಇವರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಸೇವೆ ಅಗತ್ಯವಿರುವ ಹಿನ್ನೆಲೆ ಕೆಲವೆಡೆ ಇದೇ ಸಿಬ್ಬಂದಿಯಿಂದ ಡಾಟಾ ಎಂಟ್ರಿ ಕೆಲಸವನ್ನೂ ಮಾಡಲಾಗುತ್ತಿದೆ. ಇವರಿಗೆಲ್ಲರಿಗೂ ಒಂದು ವಾರ ಕಾದು ನೋಡುವಂತೆ ಹೇಳಿ ಕರ್ತವ್ಯಕ್ಕೆ ಬರಹೇಳಲಾಗುತ್ತಿದೆ. ಅದೇ ಇನ್ನೊಂದೆಡೆ ಡಾಟಾ ಎಂಟ್ರಿ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡುವಂತೆ ಸರ್ಕಾರದ ಆದೇಶ ಹೊರಡಿಸಿದೆ.

    ಪ್ರಸಕ್ತ ಸಾಲಿನಲ್ಲಿ ಡಾಟಾ ಎಂಟ್ರಿ ಆಪರೇಷನ್ ಕಾಸ್ಟ್ ಅಡಿ ಅನುದಾನ ಅನುಮೋದನೆಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ಸೇವೆಯ ಅಗತ್ಯವಿದ್ದರೂ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವ ವಿರುದ್ಧ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ.

    ಆಯುರ್ವೇದ ಕರೊನಾ ಔಷಧಕ್ಕೆ ಮುಗಿಬಿದ್ದ ವಿದೇಶಿಗರು- ಆನಂದಯ್ಯನವರಿಗೆ ಬಿಗಿ ಭದ್ರತೆ: ಹಳ್ಳಿಯಿಂದ ಶಿಫ್ಟ್‌!

    “ಡ್ರೀಮ್‌ ಗರ್ಲ್‌” ನಟಿ ಕೋವಿಡ್‌ನಿಂದ ಸಾವು: ಮೊದಲ ಡೋಸ್‌ ಪಡೆದರೂ ಬಲಿ ಪಡೆದ ವೈರಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts