More

    ವಿಮಾ ಕಂಪನಿಗೆ ಬಿಸಿ ಮುಟ್ಟಸಿದ ಗ್ರಾಹಕ ಆಯೋಗ

    ಶಿವಮೊಗ್ಗ: ಅಪೂರ್ಣಗೊಂಡಿರುವ ವಿಮೆ ಕಂತುಗಳನ್ನು ಮರಳಿಸಲು ಹಿಂದೇಟು ಹಾಕಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕ ಆಯೋಗ ಬಿಸಿ ಮುಟ್ಟಿಸಿದೆ. ವಿಮೆಗೆಂದು ಪಾವತಿಸಿದ ಕಂತಿನ ಒಟ್ಟು ಮೊತ್ತಕ್ಕೆ ಶೇ.9 ಬಡ್ಡಿ ಸೇರಿಸಿ ಗ್ರಾಹಕನಿಗೆ ನೀಡಬೇಕು. ಸತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಕ್ಕೆ 30 ಸಾವಿರ ರೂ. ಪರಿಹಾರ ಹಾಗೂ ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂ. ನೀಡುವಂತೆ ಆಯೋಗ ಆದೇಶಿಸಿದೆ.

    ಕೆ.ಎಸ್.ಬದ್ರೀಶ್ ಎಂಬುವವರು ವಿಮೆ ಕಂಪನಿಯೊಂದರಿಗೆ 1,56,750 ರೂ. ಮೊತ್ತದ ವಿಮೆ ಪಡೆದುಕೊಂಡಿದ್ದರು. 2020-22ರ ನಡುವೆ ಕಂತು ಪಾವತಿ ಮಾಡಿದ್ದರು. ಕರೊನಾದಲ್ಲಿ ಆರ್ಥಿಕ ನಷ್ಟ ಅನುಭವಿಸಿದ ಕಾರಣ ನಂತರದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಲಿಸಿ ರದ್ದುಪಡಿಸಿ ಇದುವರೆಗೆ ಪಾವತಿಸಿದ ಕಂತನ್ನು ಮರಳಿಸುವಂತೆ ವಿಮೆ ಕಂಪನಿ ಮೊರೆ ಹೋಗಿದ್ದರು
    ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಮೆ ಕಂಪನಿ, ನಿಬಂಧನೆ ಪ್ರಕಾರ ಹಣ ಮರಳಿಸುವುದು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಬದ್ರೀಶ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಕೆ.ಎಸ್.ಬದ್ರೀಶ್ ಅವರ ಅರ್ಜಿಯನ್ನು ಪುರಸ್ಕರಿಸಿ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts