More

    ಭಗವಂತನ ಪೂಜೆಯಿಂದ ಶಾಂತಿ, ನೆಮ್ಮದಿ

    ಶೃಂಗೇರಿ: ಯಾವುದೇ ಸಂಸ್ಥೆ ಇರಲಿ ಸಂಘಟನಾತ್ಮಕ ಮನೋಭಾವ ಮುಖ್ಯ.ಆಗ ಮಾತ್ರ ನಾವು ಮಾಡುವ ಸತ್ಕಾರ್ಯಗಳು ಸಮಾಜದ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ಹೇಳಿದರು.
    ತಾಲೂಕು ಶಿವಳ್ಳಿ ಬ್ರಾಹ್ಮಣ ಮಹಾಸಭಾದಿಂದ ಗುರುವಾರ ಹರಿಹರಬೀದಿ ಶ್ರೀ ರಾಮೇಶ್ವರ ಸನ್ನಿಧಿಯಲ್ಲಿ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ನಾವು ಜೀವನದಲ್ಲಿ ಆಚರಣೆ ತಂದರೆ ಮಾತ್ರ ನಮಗೆ ಹಾಗೂ ಮುಂದಿನ ಪೀಳಿಗೆಗೆ ಅನೂಕೂಲವಾಗಲಿದೆ ಎಂದರು.
    ದಿನನಿತ್ಯ ಭಗವಂತನ ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗಲು ಸಾಧ್ಯ. ಮಹಾಸಭಾಗಳು ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಕುರಿತು ಕಾರ್ಯನಿರ್ವಹಿಸಬೇಕು. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ನಮ್ಮ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು.
    ಪ್ರಧಾನ ಕಾರ್ಯದರ್ಶಿ ಬಿ.ಜಿ.ಮುರಳೀಕೃಷ್ಣ ಭಟ್ ಮಾತನಾಡಿ, ಶಿವಳ್ಳಿ ಬ್ರಾಹ್ಮಣ ಮಹಾಸಭಾದಿಂದ ಪ್ರತಿ ವರ್ಷ ದಿನದರ್ಶಿಕೆಯನ್ನು ವೈಕುಂಠಪುರ ಮುರಳಿಕೃಷ್ಣ ಅವರಿಂದ ರಚಿಸಲಾಗುತ್ತಿದ್ದು ನಮ್ಮ ಸಮುದಾಯದ ಮನೆ-ಮನೆಗಳಿಗೆ ತಲುಪಿಸಲು ಸದಸ್ಯರ ಸಹಕಾರ ಅತಿ ಅಗತ್ಯ ಎಂದರು.
    ಹರಿಹರಪುರ ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀ ಕೃಷ್ಣಭಟ್ ತನಿಕೋಡು ಅವರು ದಿನದರ್ಶಿಕೆ ಬಿಡುಗಡೆಗೊಳಿಸಿದರು. ಮಹಾಸಭಾದ ಗೌರವ ಅಧ್ಯಕ್ಷ ಎಚ್.ಎಲ್.ತ್ಯಾಗರಾಜ್, ಅಧ್ಯಕ್ಷ ಆರ್.ಜಿ.ಕೃಷಮೂರ್ತಿ, ಪದಾಧಿಕಾರಿಗಳಾದ ಹರಿಕೆ ನಾಗಭೂಷಣ್ ರಾವ್, ವಿವೇಕಾನಂದ ಸುಂಕುರ್ಡಿ, ರಾಘವೇಂದ್ರ ಭಟ್, ನಾಗಮಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts