ನವದೆಹಲಿ: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್(Mark Zuckerberg) ಅವರ ಹೇಳಿಕೆಗಳು ಅವರ ಮೆಟಾ ಕಂಪನಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನ ಮೂಲ ಕಂಪನಿಯಾಗಿರುವ ಮೆಟಾಗೆ ಸಮನ್ಸ್ ನೀಡಲಾಗುವುದು ಎಂದು ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ ಹೇಳಿದ್ದಾರೆ. ಈ ವಿಷಯವು 2024ರ ಲೋಕಸಭಾ ಚುನಾವಣೆಯ ಕುರಿತು ಜುಕರ್‌ಬರ್ಗ್ ಅವರ ಕಾಮೆಂಟ್‌ಗಳಿಗೆ ಸಂಬಂಧಿಸಿದೆ.
ಇದನ್ನು ಓದಿ: http://Envoy Summoned | ಬಾಂಗ್ಲಾದೇಶ ಹೈಕಮಿಷನರ್ರನ್ನು ಕರೆಸಿದ ವಿದೇಶಾಂಗ ಸಚಿವಾಲಯ; ಕಾರಣ ಹೀಗಿದೆ..
ಜುಕರ್‌ಬರ್ಗ್ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಭಾರತ ಸೇರಿದಂತೆ 2024ರ ಚುನಾವಣೆಯಲ್ಲಿ ವಿಶ್ವದಾದ್ಯಂತ ಆಡಳಿತ ಪಕ್ಷಗಳು ಸೋಲನ್ನು ಎದುರಿಸುತ್ತಿವೆ ಎಂದು ಹೇಳಿಕೊಂಡಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜುಕರ್‌ಬರ್ಗ್ ಅವರ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಇದು ವಾಸ್ತವಿಕವಾಗಿ ತಪ್ಪು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತವು 2024ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಆಯೋಜಿಸಿದೆ. ಮತ್ತು ಇದರಲ್ಲಿ 64 ಕೋಟಿಗೂ ಹೆಚ್ಚು ಮತದಾರರು ಭಾಗವಹಿಸಿದ್ದರು ಎಂದು ಉತ್ತರಿಸಿದರು.
ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ತಂದಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ 2024ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಅಸ್ತಿತ್ವದಲ್ಲಿರುವ ಹೆಚ್ಚಿನ ಸರ್ಕಾರಗಳು ಸೋಲನ್ನು ಎದುರಿಸಿವೆ ಎಂಬ ಜುಕರ್‌ಬರ್ಗ್ ಅವರ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ಜುಕರ್‌ಬರ್ಗ್ ಅವರ ಹೇಳಿಕೆ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ, ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ತಪ್ಪು ಮಾಹಿತಿಯು ದೇಶದ ಘನತೆಯನ್ನು ಹಾಳು ಮಾಡುತ್ತದೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
मेरी कमिटि इस ग़लत जानकारी के लिए @Meta को बुलाएगी । किसी भी लोकतांत्रिक देश की ग़लत जानकारी देश की छवि को धूमिल करती है । इस गलती के लिए भारतीय संसद से तथा यहाँ की जनता से उस संस्था को माफ़ी माँगनी पड़ेगी https://t.co/HulRl1LF4z
— Dr Nishikant Dubey (@nishikant_dubey) January 14, 2025
Jammu and Kashmir | ರಜೌರಿಯ ಎಲ್‌ಒಸಿ ಬಳಿ ನೆಲಬಾಂಬ್ ಸ್ಫೋಟ; 6 ಯೋಧರಿಗೆ ಗಾಯ