ತಿರುವನಂತಪುರಂ: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಕೇರಳ ಹೈಕೋರ್ಟ್ (HighCourt) ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂಗೌರವ ಮತ್ತು ಘನತೆ ಇದೆ ಎಂದು ಹೇಳಿದೆ. ನ್ಯಾಯಾಧೀಶರ ಈ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
2007ರಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿರಿಯ ನಟ, ನಿರ್ದೇಶಕ ಬಾಲಚಂದ್ರ ಮೆನನ್ ಅವರಿಗೆ ಕೇರಳ ಹೈಕೋರ್ಟ್ (HighCourt) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ಗೌರವ ಮತ್ತು ಘನತೆ ಇದೆ ಎಂದು ಹೇಳಿದ್ದಾರೆ.
ನಟಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮಾಡಿದ ನ್ಯಾಯಾಧೀಶರು (HighCourt Judge), ಆರೋಪಿ ಪರ ವಕೀಲರು ಮಾಡಿರುವ ಆರೋಪದಲ್ಲಿ ಹುರುಳಿದ್ದು, 17 ವರ್ಷಗಳ ಬಳಿಕ ದೂರು ನೀಡಲಾಗಿದೆ. ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯು 40ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದು, ಸರ್ಕಾರ ಅವರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸಂತ್ರಸ್ತ ನಟಿಯ ಹೇಳಿಕೆಯನ್ನು ಆಧರಿಸಿ ನೋಡುವುದಾದರೆ, 17 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವುದು ಸತ್ಯ. ಗೌರವ ಮತ್ತು ಘನತೆ ಕೇವಲ ಮಹಿಳೆಯರಿಗೆ ಸೀಮಿತವಲ್ಲ ಎಂಬುದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಪುರುಷರಿಗೂ ಗೌರವ ಮತ್ತು ಘನತೆ ಇದೆ. ನ್ಯಾಯದ ದೃಷ್ಟಿಯಿಂದ ಈ ಪ್ರಕರಣದಲ್ಲಿ ಜಾಮೀನು ನೀಡಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ ನಿರ್ದೇಶಕ ಮೆನನ್ ಅವರು ಎರಡು ವಾರಗಳಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು. ವಿಚಾರಣೆ ಬಳಿಕ ತನಿಖಾಧಿಕಾರಿಯು ಮೆನನ್ ಅವರನ್ನು ಬಂಧಿಸಲು ಬಯಸಿದರೆ, ₹50,000 ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಾಧೀಶರಾದ ಪಿ.ವಿ. ಕುನ್ಹಿಕೃಷ್ಣನ್ (HighCourt Judge) ಆದೇಶಿಸಿದ್ದಾರೆ.
ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್ ಆಗುತ್ತಿದೆ ಶೇಖಾವತ್ ರೀ ಎಂಟ್ರಿ ವಿಡಿಯೋ
Divorce ನೀಡದೆ ಎರಡನೇ ಮದುವೆಗೆ ಸಜ್ಜಾದ ಭೂಪ; ವಿಚಾರ ತಿಳಿದು ಮೊದಲ ಪತ್ನಿ ಮಾಡಿದ್ದೇನು ಗೊತ್ತಾ?