ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್​ ಆಗುತ್ತಿದೆ ಶೇಖಾವತ್​ ರೀ ಎಂಟ್ರಿ ವಿಡಿಯೋ

Pushpa 3
Published on

ಹೈದರಾಬಾದ್​: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಚಿತ್ರವು ಬಿಡುಗಡೆಯಾಗಿ ಆರು ದಿನಗಳು ಕಳೆದಿದ್ದು, 1000 ಕೋಟಿ ರೂ ಸಂಪಾದಿಸುವ ಮೂಲಕ ಬಾಕ್ಸ್​​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಇನ್ನೂ ಚಿತ್ರವೊಂದು ಬಿಡುಗಡೆಯಾದ ಆರನೇ ದಿನಕ್ಕೆ 1000 ಕೋಟಿ ರೂ ಸಂಪಾದಿಸಿರುವುದು ಇದೇ ಮೊದಲು ಎಂದು ಹೇಳಲಾಗಿದ್ದು, ವಾರಾಂತ್ಯದಲ್ಲಿ ಪುಷ್ಪನ ಆರ್ಭಟ ಮತ್ತಷ್ಟು ಜೋರಾಗಲಿದೆ ಎಂದು ಹೇಳಲಾಗಿದೆ.

ಇನ್ಣೂ ಪುಷ್ಪ (Pushpa 1&2) ಚಿತ್ರದ ಮೊದಲ ಹಾಗೂ ಎರಡನೇ ಅವತರಣಿಕೆಯಲ್ಲಿ ನಾಯಕ ಅಲ್ಲು ಅರ್ಜುನ್​ ಪಾತ್ರಕ್ಕೆ ಸರಿಸಮಾನಾಗಿ ಟಕ್ಕರ್​ ಕೊಟ್ಟಿದ್ದ ಭನ್ವರ್​ಸಿಂಗ್​ ಶೇಖಾವತ್​ ಪಾತ್ರವು ಎರಡನೇ ಭಾಗದಲ್ಲಿ ಗೋಡೌನ್​ಗೆ ಬೆಂಕಿ ಹಚ್ಚಿಕೊಂಡು ಸಾಯುವ ದೃಶ್ಯವನ್ನು ತೋರಿಸುವ ಮೂಲಕ ಕೊನೆಗೊಳಿಸಲಾಗಿದೆ. ಇದೀಗ ಫಹಾದ್​ ಫಾಸಿಲ್​ ನಟಿಸಿದ್ದ ಪಾತ್ರಕ್ಕೆ ಸಂಬಂಧಿಸಿದ ಸುದ್ದಿಯೊಂದು ಹೊರಬಿದ್ದಿದ್ದು, ಈ ವಿಚಾರ ಕೇಳಿ ಫ್ಯಾನ್ಸ್​ ಮತ್ತಷ್ಟು ಥ್ರಿಲ್​ ಆಗಿದ್ದಾರೆ.

ಭನ್ವರ್​ಸಿಂಗ್​ ಶೇಖಾವತ್​ ಎಂಬ ಖಡಕ್​ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಮಿಂಚಿರುವ ಫಹಾದ್​ ಫಾಸಿಲ್​ ಎರಡನೇ ಭಾಗದಲ್ಲಿ ಗೋಡೌನ್​ಗೆ ಬೆಂಕಿ ಹಚ್ಚಿಕೊಳ್ಳುತ್ತಾರೆ. ಆ ನಂತರ ಏನಾಯ್ತು ಎಂಬ ವಿಚಾರವನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದಕ್ಕೆ ಮೂರನೇ ಭಾಗದಲ್ಲಿ ಉತ್ತರ ಸಿಗಲಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪುಷ್ಪ-2ಗೆ (Pushpa 2) ಸಂಬಂಧಿಸಿದ ಸುದ್ದಿ ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ಧಾರೆ.

ಗೋಡೌನ್ ಒಳಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗುತ್ತಿರುವಾಗ ಆತನನ್ನು ರಕ್ಷಣೆ ಮಾಡಲಾಗುತ್ತದೆ. ಬೆಂಕಿ ಆರಿಸಿ ಆತನ ಬದುಕುಳಿಸಲಾಗುತ್ತದೆ. ಇದಲ್ಲದೆ ಪುಷ್ಪ-2 ಕ್ಲೈಮ್ಯಾಕ್ಸ್​ನಲ್ಲಿ ಒಂದು ಬಾಂಬ್​ಬ್ಲ್ಯಾಸ್ಟ್​ ಸೀನ್​ ಇದೆ. ಇದರಲ್ಲಿ ವ್ಯಕ್ತಿಯ ಮುಖದ ಬದಲು ಡೆವಿಲ್​ ಸಿಂಬಲ್​ಅನ್ನು ತೋರಿಸಲಾಗುತ್ತದೆ. ಇದು ಶೇಖಾವತ್​ ಎಂದು ಹೇಳಲಾಗಿದ್ದು, ಸದ್ಯಕ್ಕೆ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net