

ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಾವು ಸಾರ್ವಜನಿಕ ಸ್ಥಳ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರುವವರನ್ನು ನಾವು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ.
ಇದೀಗ ದೆಹಲಿ ಮೆಟ್ರೋದಲ್ಲಿ ಅದೇ ರೀತಿಯ ಘಟನೆಯೊಂದು ನಡೆದಿದ್ದು ನೆಟ್ಟಿಗರನ್ನು ಕೆರಳಿಸಿ ಕಣ್ಣು ಕೆಂಪಾಗಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರಹಾಕಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಕಂಡು ಬರುತ್ತದೆ. ಪಕ್ಕದಲ್ಲೇ ಇರುವ ಸ್ನೇಹಿತರು ಅಪಹಾಸ್ಯ ಮಾಡುತ್ತ ನಗುತ್ತಿರುವುದು ಕಂಡು ಬರುತ್ತದೆ.
ಯುವರಿಬ್ಬರು ಮೆಟ್ರೋ ರೈಲಿನ ಬಾಗಿಲ ಬಳಿ ನಿಂತು ಅದನ್ನು ಮುಚ್ಚುವ ಸಮಯಕ್ಕೆ ಆಟೋಮ್ಯಾಟಿಕ್ ಡೋರ್ಗೆ ಅಡ್ಡಲಾಗಿ ಕಾಲನ್ನು ಇರಿಸುತ್ತಿರುವುದು ಕಂಡು ಬರುತ್ತದೆ. ಕರೋಲ್ ಭಾಗ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋ ನಿಗಮ ರೈಲಿನ ಒಳ ಹಾಗೂ ಹೊರ ಭಾಗ ಬರೆದಿರುವ ಕೋಚ್ ಸಂಖ್ಯೆಯನ್ನು ಒದಗಿಸುವಂತೆ ಚಿತ್ರಗಳನ್ನು ಪೋಸ್ಟ್ ಮಾಡಿ ರಿಯಾಕ್ಟ್ ಮಾಡಿದೆ.