'ಮೆಲ್ಲಗೆ' ಬರಲಿದೆ ನವೆಂಬರ್ 6 ರಂದು!

Untitled design - 2023-11-02T201124.609
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ನಿರ್ದೇಶಕ, ಬರಹಗಾರ, ನಟ ರಾಜ್​ ಬಿ.ಶೆಟ್ಟಿ ಮತ್ತು ನಟಿ ಸಿರಿ ರವಿಕುಮಾರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಬಗ್ಗೆ ಸದ್ಯ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತಿದೆ. 'ಟೋಬಿ' ಮೂಲಕ ಅಬ್ಬರಿಸಿದ ರಾಜ್​ ಈ ಚಿತ್ರದ ಮುಖೇನ ಯಾವ ಕಥೆಯನ್ನು ಸಿನಿಪ್ರೇಕ್ಷಕರಿಗೆ ನೀಡಲಿದ್ದಾರೆ ಎಂಬ ಪ್ರಶ್ನೆ ಸದ್ಯ ಹಲವರಲ್ಲಿ ಮೂಡಿದೆ.

ಕನ್ನಡ ಚಿತ್ರರಂಗದ ಮೋಹಕ ತಾರೆ, ನಟಿ ರಮ್ಯ ಅವರು 'ಸ್ವಾತಿ ಮುತ್ತಿನ ಮಳೆ ಹನಿಯೇ' ಮೂಲಕ ಮತ್ತೊಮ್ಮೆ ನಟನೆಗೆ ಮರಳಿದ್ದು, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ. ಆ್ಯಪಲ್​ ಬಾಕ್ಸ್​ನಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ ಇದಾಗಿದೆ. ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ರಿಲೀಸ್​ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದೆ.

ಇದರ ಬೆನ್ನಲ್ಲೇ ಚಿತ್ರದ 'ಮೆಲ್ಲಗೆ' ಹಾಡನ್ನು ನವೆಂಬರ್​ 06 ರಂದು ಸಂಜೆ 06ಕ್ಕೆ ಯೂಟ್ಯೂಬ್​ನಲ್ಲಿ​ ಬಿಡುಗಡೆಗೊಳಿಸುವುದಾಗಿ ರಾಜ್​ ಬಿ.ಶೆಟ್ಟಿ ಹಾಗೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net