ಸೋದರತ್ತೆಯನ್ನೇ ರೇಪ್​ ಮಾಡಲು ಪ್ರಯತ್ನಿಸಿದ ಯುವಕ! ಕುತ್ತಿಗೆ ಕೊಯ್ದು ಕೊಂದೇ ಬಿಟ್ಟ

murder
Published on

ಮೀರತ್​: ಸೋದರ ಅತ್ತೆಯನ್ನೇ ಅತ್ಯಾಚಾರ ಮಾಡಲು ಪ್ರಯತ್ನಿಸಿ, ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಘಟನೆ ನಡೆದು ಎರಡೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಮೀರತ್​ನ ಜಾನಿ ಪ್ರದೇಶ ವಾಸಿ ಮಹಿಳೆಯ ಸೋದರ ಅಳಿಯ ಬುಧವಾರದಂದು ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದಿದ್ದಾನೆ. ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಅದಕ್ಕೆ ವಿರೋಧಿಸಿದ ಮಹಿಳೆ ಅಳಿಯನ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದಾಗಿ ಸಿಟ್ಟಾದ ಆತ, ಮನೆಯ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು, ಅದರಿಂದ ಮಹಿಳೆಯ ಕುತ್ತಿಗೆಯನ್ನು ಮನಸೋಇಚ್ಛೆ ಕೊಯ್ದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಮಹಿಳೆಯ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಗ ಕೊಲೆ ಮಾಡಿರುವ ಅಳಿಯನ ಕೈನಲ್ಲಿ ಸಣ್ಣ ಪುಟ್ಟ ಗಾಯ ಹಾಗೂ ಚಪ್ಪಲಿಯಲ್ಲಿ ರಕ್ತದ ಕಲೆ ಕಾಣಿಸಿದೆ. ಆತನ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಯುವಕ ನಿಜ ಘಟನೆಯನ್ನು ವಿವರಿಸಿದ್ದಾನೆ. ಪೊಲೀಸರು ಇದೀಗ ಆತನನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net