

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ''ರಾಬರ್ಟ್'' ರಿಲೀಸ್ಗೆ ಚಿತ್ರತಂಡ ಸಜ್ಜಾಗಿದೆ. ಈ ನಡುವೆ ಕ್ಯಾತೆ ತೆಗೆದ ಟಾಲಿವುಡ್ ವಿರುದ್ಧ ಗರಂ ಆಗಿರುವ ನಟ ದರ್ಶನ್, ದೂರು ನೀಡಿದ್ದಾರೆ.
ಮಾರ್ಚ್ 11ರಂದು ರಾಬರ್ಟ್ ಸಿನಿಮಾ ರಿಲೀಸ್ ನಿರ್ಮಾಪಕರು ಡೇಟ್ ಫಿಕ್ಸ್ ಮಾಡಿದ್ದಾರೆ. ಆದರೆ ಆ ದಿನ ಆಂಧ್ರದಲ್ಲಿ ರಾಬರ್ಟ್ ರಿಲೀಸ್ಗೆ ಅಡ್ಡಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆಯುತ್ತಿದ್ದು, ನಟ ದರ್ಶನ್, ರಾಬರ್ಟ್ ಸಿನಿಮಾ ನಿರ್ದೇಶಕ ಉಮಾಪತಿ ಪಾಲ್ಗೊಂಡಿದ್ದರು. ಇದನ್ನೂ ಓದಿರಿ ಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ಆ ಮನೆಗೆ ದುಷ್ಕರ್ಮಿ ಬಂದಿದ್ದಾದರೂ ಏಕೆ?
ರಾಬರ್ಟ್ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲದೇ ತೆಲುಗಿನ "ಶ್ರೀಕಾರನ್", "ಗಾಲಿ ಸಂಪತ್" ಹಾಗೂ "ಜಾಥಿ ರತ್ನಲು" ಚಿತ್ರಗಳು ಬಿಡುಗಡೆ ಆಗ್ತಿವೆ. ಹಾಗಾಗಿ ತೆಲುಗು ಚಿತ್ರಗಳಿಗೆ ತೊಂದರೆ ಆಗದಿರಲಿ ಎಂದು ರಾಬರ್ಟ್ ದಿನಾಂಕವನ್ನು ಮುಂದೂಡಿ ಎಂದು ರಾಬರ್ಟ್ ನಿರ್ಮಾಪಕರಿಗೆ ಆಂಧ್ರದ ಸಿನಿಮಾ ವಿತರಕರು ಸಲಹೆ ಕೊಟ್ಟಿದ್ದಾರೆ.
ಸಭೆಗೂ ಮುನ್ನ ಮಾತನಾಡಿದ ಉಮಾಪತಿ, ತೆಲುಗು ಚಿತ್ರಗಳ ಪರ ಅಲ್ಲಿನ ಫಿಲ್ಮ್ ಚೇಂಬರ್ ನಿಲ್ಲುತ್ತೆ. ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಅಂದುಕೊಂಡ ಡೇಟ್ಗೆ ರಿಲೀಸ್ ಆಗುತ್ತವೆ. ನಮ್ಮ ವಾಣಿಜ್ಯ ಮಂಡಳಿಯೂ ನಮ್ಮ ಪರ ನಿಂತು ಮಾತನಾಡಬೇಕು. ಪರಭಾಷಾ ಚಿತ್ರಗಳ ವಿರುದ್ಧ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ಆಗ್ರಹಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್, ಕೇವಲ ನನ್ನ ಸಿನಿಮಾ ಮಾತ್ರವಲ್ಲ, ಹೊಸಬರ ಸಿನಿಮಾಗಳಿಗೂ ಇದೇ ಸಮಸ್ಯೆ ಎದುರಾಗಲಿದೆ. ನಮಗಾಗಿ ನಾನು ಬಂದಿಲ್ಲ, ನಮ್ಮಿಂದ ಮುಂದೆ ಎಲ್ಲರಿಗೂ ದಾರಿಯಾಗಲಿ. ಇದು ಒಂದು ಕೈಯಿಂದ ಚಪ್ಪಾಳೆ ತಟ್ಟಲು ಆಗೋದಿಲ್ಲ. ನಮ್ಮ ನಟರ ಸಿನಿಮಾಗಳಿಗೆ ಅಲ್ಲಿ ಬೆಲೆ ಇಲ್ಲ ಅಂದ್ರೆ ನಾವು ಅವರ ಸಿನಿಮಾಗಳಿಗ್ಯಾಕೆ ಬೆಲೆ ಕೊಡಬೇಕು? ಎಂದು ಪ್ರಶ್ನಿಸಿದರು. ವಾಣಿಜ್ಯ ಮಂಡಳಿಯ ಮೇಲೆ ನನಗೆ ನಂಬಿಕೆಯಿದೆ. ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಅದೇ ಡೇಟ್ಗೆ ರಿಲೀಸ್ ಆಗುತ್ತೆ ಎಂದರು.