40ನೇ ವಯಸ್ಸಿನವರೆಗೂ ಬಾಕ್ಸಿಂಗ್‌ನಲ್ಲಿರುವೆ ಎಂದ ಮೇರಿ ಕೋಮ್...

mary kom for web
Published on

ನವದೆಹಲಿ: ಭಾರತದ ಸ್ಟಾರ್ ಬಾಕ್ಸಿಂಗ್ ಪಟು ಎಂಸಿ ಮೇರಿಕೋಮ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೋಲನುಭವಿಸಿದ ಬಳಿಕ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂದು ಭಾವಿಸಲಾಗಿತ್ತು. ಒಲಿಂಪಿಕ್ಸ್‌ನಲ್ಲಿ ಕೊಲಂಬಿಯಾ ಬಾಕ್ಸರ್ ಎದುರು 16ರ ಘಟ್ಟದಲ್ಲಿ ರೆಫ್ರಿಗಳು ಮಾಡಿದ ಪ್ರಮಾದಿಂದಾಗಿ ಮೇರಿ ಕೋಮ್ ಸೋಲು ಕಂಡರು ಎಂದು ದೂರಲಾಗಿತ್ತು. ಇದೀಗ 40 ವರ್ಷಗಳ ವರೆಗೂ ಹೋರಾಟ ಮುಂದುವರಿಸುವುದಾಗಿ ಸ್ವತಃ ಮೇರಿ ಕೋಮ್ ಹೇಳಿಕೊಂಡಿದ್ದಾರೆ. 38 ವರ್ಷದ ನಾಲ್ಕು ಮಕ್ಕಳ ತಾಯಿ ಮೇರಿ ಕೋಮ್, ಬಾಕ್ಸಿಂಗ್ ರಿಂಗ್‌ಗೆ ವಿದಾಯ ೋಷಿಸಲಿದ್ದಾರೆ ಎಂದು ಈ ಮೊದಲ ಹೇಳಲಾಗಿತ್ತು.

ಬಾಕ್ಸಿಂಗ್ ರಿಂಗ್‌ನಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ. ಶೀಘ್ರವೇ ವಾಪಸಾಗುವೆ, ನನಗಿನ್ನೂ ವಯಸ್ಸಿದ್ದು, 40 ವರ್ಷದವರೆಗೂ ಆಡುವೆ ಎಂದು ಹೇಳಿದ್ದಾರೆ. ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೇರಿ ಕೋಮ್ ಈ ವಿಷಯ ಹೇಳಿಕೊಂಡಿದ್ದಾರೆ. ಟೋಕಿಯೊದಲ್ಲಿ ನನಗೆ ರೆಫ್ರಿಗಳಿಂದ ಅನ್ಯಾಯವಾಗಿದೆ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನನ್ನಿಂದ ಇಡೀ ದೇಶವೇ ಪದಕ ನಿರೀಕ್ಷಿಸಿತ್ತು. ಆದರೆ ಸಾಧ್ಯವಾಗಲಿಲ್ಲ. ಇದರಿಂದ ಜನರಿಗೂ ನೋವಾಗಿದೆ. ಎಲ್ಲರ ಬಳಿ ಕ್ಷಮೆಯಾಚಿಸುವೆ ಎಂದು ಮೇರಿ ಕೋಮ್ ಹೇಳಿದ್ದಾರೆ.

ಪದಕ ಜಯಿಸಿದ ಸ್ವದೇಶಕ್ಕೆ ವಾಪಸಾಗಿದ್ದು ಬೇಸರ ತರಿಸಿದೆ. ನನಗೆ ಪದಕ ಜತೆಗೆ ವಾಪಸಾಗಬೇಕೆಂಬ ಆಸೆಯಿತ್ತು ಎಂದು 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಹೇಳಿದ್ದಾರೆ. ನಾನಿನ್ನು ಸಾಧಿಸಬೇಕಾಗಿರುವುದು ತುಂಬಾ ಇದೆ. ಏಷ್ಯಾಡ್ ಇನ್ನು ಹತ್ತಿರದಲ್ಲೇ ಇದೆ. ಮುಂದೆ ಅದಕ್ಕೆ ಸಿದ್ಧತೆ ಕೈಗೊಳ್ಳುವೆ ಎಂದು ಹೇಳಿದರು. 2022ರ ಏಷ್ಯಾಡ್ ಚೀನಾದ ಹಾಂಗ್‌ರೆೌನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net