More

    ಜೋಕೊವಿಕ್‌ಗೆ ಒಲಿಂಪಿಕ್ಸ್‌ನಲ್ಲಿ ನಿರಾಸೆ; ಬರಿಗೈಲಿ ವಾಪಸಾದ ವಿಶ್ವ ನಂ.1

    ಟೋಕಿಯೊ: ವಿಶ್ವ ನಂ.1 ನೊವಾಕ್ ಜೋಕೊವಿಕ್ ಟೋಕಿಯೊ ಒಲಿಂಪಿಕ್‌ನ ಟೆನಿಸ್ ಸ್ಪರ್ಧೆಯಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಗೋಲ್ಡನ್ ಸ್ಲಾಂ ಸಾಧಿಸುವ ಅಪರೂಪದ ಅವಕಾಶ ತಪ್ಪಿಸಿಕೊಂಡಿದ್ದ ಜೋಕೋ, ಶನಿವಾರ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ 4-6, 7-6, 3-6 ಸೆಟ್‌ಗಳಿಂದ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಸೋಲನುಭವಿಸಿದರು. ಕಳೆದ 24 ಗಂಟೆಗಳಲ್ಲಿ ಜೋಕೋ ಅನುಭವಿಸಿದ 3ನೇ ಸೋಲು ಇದಾಗಿದೆ. ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲೂ ಜೋಕೋ ಸೋಲನುಭವಿಸಿದ್ದರು. ಇದರಿಂದ ಜೋಕೋ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಪದಕವಿಲ್ಲದೆ ಬರಿಗೈಲಿ ವಾಪಸಾದರು.

    ಇದನ್ನೂ ಓದಿ: ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್‌ಗೆ ಅಭಿಮಾನಿಗಳು ಫಿದಾ,

    ಕಂಚಿನ ಪದಕದ ಪಂದ್ಯದ ವೇಳೆ ಸಿಟ್ಟಾಗಿದ್ದ ಜೋಕೋ, ಹಲವು ಬಾರಿ ಕೋರ್ಟ್‌ನಲ್ಲೇ ರ‌್ಯಾಕೆಟ್ ಎಸೆದು ಮುರಿದು ಹಾಕಿದರು. ಸತತವಾಗಿ 16 ಸೆಟ್‌ಗಳನ್ನಾಡಿದ್ದ (4 ದಿನಗಳಲ್ಲಿ 4 ಪಂದ್ಯ) ಜೋಕೋ, ಎಡ ಭುಜದ ನೋವಿನಿಂದಾಗಿ ಮಿಶ್ರ ಡಬಲ್ಸ್ ವಿಭಾಗದ ಕಂಚಿನ ಪದಕದ ಪಂದ್ಯದಿಂದ ಹಿಂದೆ ಸರಿದರು. ಶುಕ್ರವಾರ ಸೆಮಿಫೈನಲ್ ಹಣಾಹಣಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜೆರೇವ್ ಎದುರು ಸೋಲು ಕಂಡಿದ್ದರು. ಅತಿಯಾದ ಉಷ್ಣಾಂಶವೂ ಕೂಡ ನಿರ್ವಹಣೆಗೆ ಅಡ್ಡಿಯಾಯಿತು. ಮಿಶ್ರ ಡಬಲ್ಸ್‌ನಿಂದ ಹಿಂದೆ ಸರಿದ ಬಗ್ಗೆಯೂ ಜತೆಗಾರ್ತಿ ನಿನಾ ಸ್ಟೊಜಾನೊವಿಕ್ ಅವರ ಕ್ಷಮೆಯಾಚಿಸಿದರು.

    ಇದನ್ನೂ ಓದಿ: ಆರ್‌ಸಿಬಿ ತೆಕ್ಕೆಗೆ ಶ್ರೀಲಂಕಾದ ಆಲ್ರೌಂಡರ್ ಲೆಗ್‌ಸ್ಪಿನ್ನರ್ ವಹಿಂದು ಹಸರಂಗ ? 

    ಸೆರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೋಕೊವಿಕ್, ಪ್ರಸಕ್ತ ವರ್ಷದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಜಯಿಸಿದ್ದಾರೆ. ಆಗಸ್ಟ್ 30 ರಿಂದ ವರ್ಷದ ಕಡೇ ಗ್ರಾಂಡ್ ಸ್ಲಾಂ ಯುಎಸ್ ಓಪನ್ ಆರಂಭವಾಗಲಿದೆ. 1988ರಲ್ಲಿ ಸ್ಟೆಫಿ ಗ್ರಾಫ್ ಬಳಿಕ ಗೋಲ್ಡನ್ ಸ್ಲಾಂ ಜಯಿಸುವ ಅಪರೂಪದ ಅವಕಾಶವನ್ನು ಜೋಕೋ ಹೊಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts