ಮೈದಾನದಲ್ಲಿ ಓಡಾಡುವುದಕ್ಕೆ ಕಾಯುತ್ತಿದ್ದೇನೆ ಎಂದ ಮಯಾಂಕ್​..!

mayank agarwal for web
Published on

ಬೆಂಗಳೂರು: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆ.19 ರಿಂದ ನವೆಂಬರ್​ 10ರವರೆಗೆ 13ನೇ ಐಪಿಎಲ್​ ವೇಳಾಪಟ್ಟಿ ಪ್ರಕಟಿಸಿದ್ದೇ ತಡ, ಭಾರತೀಯ ಕ್ರಿಕೆಟಿಗರಲ್ಲಿ ಚಟುವಟಿಕೆ ಗರಿಗೆದರಿದೆ. ದೂರದ ಯುಎಇಯಲ್ಲಿ ಐಪಿಎಲ್​ ನಡೆಯುತ್ತಿದ್ದರೂ ಆಟಗಾರರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಕರೊನಾ ವೈರಸ್​ ಭೀತಿಯಿಂದಾಗಿ ಕಳೆದ 4 ತಿಂಗಳಿಂದ ಕ್ರಿಕೆಟ್​ ಚಟುವಟಿಕೆಯಿಂದ ದೂರವಿದ್ದ ಕ್ರಿಕೆಟಿಗರು ಇದೀಗ ಐಪಿಎಲ್​ನತ್ತ ಮುಖಮಾಡಿದ್ದಾರೆ. ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಪರ ಕಣಕ್ಕಿಳಿಯಲು ಸನ್ನದ್ಧವಾಗಿರುವ ಮಯಾಂಕ್​ ಅಗರ್ವಾಲ್​ ಮಾತ್ರ ವಿಶೇಷ ಯೋಜನೆಯೊಂದಿಗೆ ಸಿದ್ಧವಾಗುತ್ತಿದ್ದಾರೆ. ಮೈದಾನದ ಸುತ್ತ ಓಡುವುದನ್ನು ಕಾಯುತ್ತಿದ್ದೇನೆ. ನನಗೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕ್ರಿಕೆಟ್​ ಆಡಲು ಉತ್ಸುಕನಾಗಿರುವ ಮಯಾಂಕ್​, ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ. ಟೆಸ್ಟ್​, ಏಕದಿನ ಹಾಗೂ ಟಿ20 ಹೀಗೆ ಮೂರು ಮಾದರಿಗೂ ಸೈ ಎನಿಸಿಕೊಂಡಿರುವ ಆಟಗಾರ. ಇದೀ ಐಪಿಎಲ್​ ಘೋಷಣೆಯಿಂದಾಗಿ ಕ್ರಿಕೆಟ್​ ಚಟುವಟಿಕೆಗೆ ಮರಳಲು ಸರ್ವಸನ್ನದ್ಧರಾಗಿದ್ದಾರೆ. ಕಿಟ್​ ಹಾಕಿಕೊಂಡಿರುವ ಫೋಟೋವೊಂದನ್ನು ಟ್ವೀಟ್​ ಮಾಡುವ ಮೂಲಕ ಕ್ರಿಕೆಟ್​ಗೆ ಸಿದ್ಧವಿರುವುದಾಗಿ ತೋರಿಸಿದ್ದಾರೆ.

ಟೂನಿರ್ಯೂ 53 ದಿನಗಳ ಕಾಲ ಯುಎಇಯ ದುಬೈ, ಅಬಿಧಾಬಿ ಹಾಗೂ ಶಾರ್ಜಾದಲ್ಲಿ ನಡೆಯಲಿದೆ. ಇದೇ ವೇಳೆ ನವೆಂಬರ್​ 1 ರಿಂದ 10 ರವರೆಗೆ ಮಹಿಳಾ ಐಪಿಎಲ್​ ಕೂಡ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net