ಆತ ಜಸ್ಟ್​ ಫೋಕಸ್​ ಮಾಡಿದರೆ ಸಾಕು; ಟೀಮ್​ ಇಂಡಿಯಾ ಆಟಗಾರನ ಕುರಿತು ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ

Ravi Shastri

ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್​ ಪಾಂಡ್ಯ ನಾಯಕನಾಗಿ ಆಯ್ಕೆಯಾಗದಿರುವ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹಾರ್ದಿಪ್​ ಪಾಂಡ್ಯ ಹೊಸ ಚರ್ಚಾ ವಿಷಯವಾಗಿದ್ದಾರೆ. ಏಕೆಂದರೆ ಟಿ20 ವಿಶ್ವಕಪ್​ ಮುಗಿದ ಬಳಿಕ ರೋಹಿತ್​ ಶರ್ಮ ಚುಟುಕು ಮಾದರಿಗೆ ನಿವೃತ್ತಿ ಘೋಷಿಸಿದ್ದು, ಹಾರ್ದಿಕ್​ನನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಸೂರ್ಯಕುಮಾರ್​ಗೆ ಮಣೆ ಹಾಕಿದ ಬಿಸಿಸಿಐ ಹಾರ್ದಿಕ್​ಗೆ ನಿರಾಸೆ ಮೂಡಿಸಿತ್ತು.

ಹಾರ್ದಿಕ್​ಗೆ ನಾಯಕತ್ವ ವಹಿಸದೆ ಇರಲು ಫಿಟ್ನೆಸ್​ ಮುಖ್ಯ ಕಾರಣ ಎಂದು ಹೇಳಲಾಗಿದ್ದು, ಹಾರ್ದಿಕ್​ಗೆ ದೇಶೀಯ ಟೂರ್ನಿಗಳಲ್ಲಿ ಹೆಚ್ಚಾಗಿ ಆಡುವಂತೆ ಬಿಸಿಸಿಐ ಸಲಹೆ ನೀಡಿದೆ. ಇನ್ನೂ ಈ ಬಗ್ಗೆ ಟೀಮ್​ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದದ್ದು, ಹಾರ್ದಿಕ್​ ಪಾಂಡ್ಯಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

Hardik Pandya

ಇದನ್ನೂ ಓದಿ: ಪುಟ್ಟ ಒಲಿಂಪಿಯನ್​ಅನ್ನು ಹೊತ್ತೊಯ್ಯುತ್ತಿದ್ದೇನೆ; ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾದ ಗರ್ಭಿಣಿ ಅಥ್ಲೀಟ್

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರವಿಶಾಸ್ತ್ರಿ, ಆತ ನಿರಂತರವಾಗಿ ಆಟವಾಡಬೇಕೆಂದು ನಾನು ಭಾವಿಸುತ್ತೇನೆ. ಏಕೆಂದರೆ ನನ್ನ ಪ್ರಕಾರ ಪಂದ್ಯದ ಫಿಟ್ನೆಸ್ ಬಹಳ ಮುಖ್ಯ ಹಾಗಾಗಿ ಯಾವುದೇ ಮಾದರಿಯ ಕ್ರಿಕೆಟ್​ ಇರಲಿ ಎಷ್ಟು ಸಾಧ್ಯವಾಗುತ್ತದೋ ಹಾರ್ದಿಕ್​ ಅಷ್ಟು ಆಡಿದೆ ಮುಖ್ಯ. ಅತ ಇದಷ್ಟರ ಮೇಲೆ ಫೋಕಸ್​ ಮಾಡಿದರೆ ಸಾಕು.

ಆತ ಫಿಟ್​ ಆಗಿದ್ದಾನೆ ಎಂದೆನಿಸಿದರೆ ಏಕದಿನ ತಂಡಕ್ಕೆ ವಾಪಸ್​ ಆಗಲಿದ್ದಾನೆ. ಏಕೆಂದರೆ ಏಕದಿನ ಮಾದರಿಯಲ್ಲಿ 10 ಓವರ್​ಗಳನ್ನು ಬೌಲ್​ ಮಾಡಬೇಕಾಗುತ್ತದೆ. ಬೌಲಿಂಗ್​ ಮಾಡಿದ ರೀತಿಯೂ ಬ್ಯಾಟಿಂಗ್​ ಮಾಡಬೇಕಾಗುತ್ತದೆ. ಫಿಟ್​ ಆಗಿದ್ದರೆ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಹಾರ್ದಿಕ್​ ಖಂಡಿತವಾಗಿಯೂ ಏಕದಿನ ಮಾದರಿಯಲ್ಲೂ ಆಡಲಿದ್ದಾರೆ ಎಂದು ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಹೇಳಿದ್ದಾರೆ.

Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…