ಭಾರತ ಟೂರ್ನಿಯಲ್ಲಿ ಭಾಗಿಯಾಗುವ ವಿಚಾರ ಐಸಿಸಿ ನಿರ್ಧಾರಕ್ಕೆ ಬಿಟ್ಟದ್ದು; ಹೊಸ ವರಸೆ ಶುರು ಮಾಡಿದ ಪಿಸಿಬಿ

PCB BCCI
Published on

ನವದೆಹಲಿ: ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ​ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಜಟಾಪಟಿಗೆ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ಭಾಗವಹಿಸುವಿಕೆ ವಿಚಾರವಾಗಿ ಪಿಸಿಬಿಯ ಈ ವರ್ತನೆಯಿಂದ ಐಸಿಸಿ ಅಚ್ಚರಿ ವ್ಯಕ್ತಪಡಿಸಿದೆ.

ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಪಿಗೆ ಆತಿಥೇಯ ಪಾಕಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಭಾಗಿಯಾಗುತ್ತಿದೆ. ಆದರೆ, ಭಾರತ ತನ್ನ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ಆಯೋಜಿಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿದ್ದು, ಪಾಕಿಸ್ತಾನದ ನೆಲದಲ್ಲಿ ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ಹೇಳಿದೆ. ಈ ಸಂಬಂಧ ಪಿಸಿಬಿ ಅಧ್ಯಕ್ಷ ಮೊಹ್ಸಿನ್​ ನಖ್ವಿ ನೀಡಿರುವ ಉತ್ತರ ಎಲ್ಲರ ಗಮನ ಸೆಳಯುತ್ತಿದೆ.

ಭಾರತದ ಕ್ರಿಕೆಟ್​​​​ ತಂಡ ಪಾಕಿಸ್ತಾನಕ್ಕೆ ಟೂರ್ನಿಗೆ ಬರಬೇಕು ಅಥವಾ ಟೀಂ ಇಂಡಿಯಾ ಇಲ್ಲದೇ ಟೂರ್ನಿ ಆಯೋಜಿಸಲಾಗುತ್ತದೆಯೇ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಖ್ವಿ, ಮಂಡಳಿಯು ಈ ಬಾರಿ ಹೈಬ್ರಿಡ್ ಮಾದರಿಗೆ ಸಿದ್ಧವಾಗುವುದಿಲ್ಲ ಎಂದು ಹೇಳಿಕೊಂಡಿದೆ ಮತ್ತು ಈ ಪಂದ್ಯಾವಳಿಗೆ ತಂಡವನ್ನು ಕಳುಹಿಸಲು ಐಸಿಸಿ ಬಿಸಿಸಿಐಗೆ ಮನವರಿಕೆ ಮಾಡುತ್ತದೆ.

India vs Pakistan

ಟೂರ್ನಿ ಆಯೋಜನೆ ಸಂಬಂಧ ನಾವು ಈಗಾಗಲೇ ಐಸಿಸಿಗೆ ಡ್ರಾಫ್ಟ್​, ವೇಳಾಪಟ್ಟಿ ಮತ್ತು ಬಜೆಟ್​ ಗಾತ್ರದ ಕುರಿತು ಪಟ್ಟಿಯನ್ನು ಸಲ್ಲಿಸುವ ಆತಿಥೇಯರಾಗಿ ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಿದ್ದೇವೆ. ಭಾರತ ಭಾಗವಹಿಸಿವುದು ಬಿಡುವುದರ ಬಗ್ಗೆ ಐಸಿಸಿ ನಿರ್ಧರಿಸಲಿದೆ ಎಂದು ಪಿಸಿಬಿ ಅಧ್ಯಕ್ಷ ಮಹ್ಸಿನ್​ ನಖ್ವಿ ಹೇಳಿದ್ದಾರೆ.

ಪಿಸಿಬಿಯ ಅಧ್ಯಕ್ಷರ ಈ ಹೇಳಿಕೆಯಿಂದ ಐಸಿಸಿ ಅಚ್ಚರಿಗೊಂಡಿದೆ. ಏಕೆಂದರೆ ಭಾರತ ಟೂರ್ನಿಯಲ್ಲಿ ಭಾಗಿಯಾಗದಿದ್ದರೆ ಐಸಿಸಿ ಹಾಗೂ ಪಿಸಿಬಿಗೆ ದೊಡ್ಡ ಮಟ್ಟದಲ್ಲಿ ನಷ್ಟವಾಗಲಿದ್ದು, ಈ ನಿಟ್ಟಿನಲ್ಲಿ ಭಾರತದ ಭಾಗವಹಿಸುವಿಕೆ ಅಗತ್ಯವಾಗಿದೆ. ಇದಲ್ಲದೆ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ಐಸಿಸಿ ಮುಂದಾಗಿದ್ದು, ಇದಕ್ಕೆ ತಗುಲುವ ಶುಲ್ಕವನ್ನು ಭರಿಸಲು ಮುಂದಾಗಿರುವುದಾಗಿ ಪಿಸಿಬಿ ಬಳಿ ಹೇಳಿದೆ. ಆದರೆ, ಇದಕ್ಕೊಪ್ಪದ ಪಿಸಿಬಿ ಭಾರತ ಇಲ್ಲದೇ ಟೂರ್ನಿ ಆಯೋಜಿಸಲು ಸಿದ್ದವಿರುವುದಾಗಿ ಹೇಳಿದೆ.

ಒಂದು ಭಾರತ ಆಡಿದರೆ ಪಾಕ್​ ನೆಲದಲ್ಲಿ ಆಡಬೇಕು ಇಲ್ಲವಾದಲ್ಲಿ ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಪುರುಷರ ಏಷ್ಯಾಕಪ್​ನಲ್ಲಿ ನಾವು ಯಾವುದೇ ಕಾರಣಕ್ಕೂ ಭಾಗವಹಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ತಿಕ್ಕಾಟ ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net