

ಮುಂಬೈ: ಜುಲೈ 29ರಂದು 65ನೇ ವಸಂತಕ್ಕೆ ಕಾಲಿಟ್ಟ ನಟ ಸಂಜಯ್ ದತ್ ತಮ್ಮ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕುಟುಂಬದವರ ಜೊತೆಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಘಟನೆಯೊಂದು ನಡೆದಿದ್ದು, ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹಲವರು ಸಂಜಯ್ ದತ್ ನಡೆಗೆ ಕಿಡಿಕಾರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜುಲೈ 29ರಂದು ತಮ್ಮ ಜನ್ಮದಿನವನ್ನು ಆಪ್ತರ ಜೊತೆ ಆಚರಿಸಿಕೊಳ್ಳಲು ಸಂಜಯ್ ದತ್ ಮುಂಬೈನ ಹೋಟೆಲ್ ಒಂದಕ್ಕೆ ಆಗಮಿಸಿದ್ದರು. ನೆಚ್ಚಿನ ನಟ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು ಸಂಜಯ್ರನ್ನು ನೋಡಲು ಮುಗಿಬಿದ್ದಿದ್ದಾರೆ. ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಂತೆ ಕಿರಿಕಿರಿ ಅನುಭವಿಸಿದ ನಟ ಅವರನ್ನು ನೂಕಿ ಮುಂದಕ್ಕೆ ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಹೋಟೆಲ್ ಒಂದರಿಂದ ಹೊರಬರುವ ಸಂಜಯ್, ಫ್ಯಾನ್ಸ್ನ ಮಾತನಾಡಿಸದೆ ಹೋಗುತ್ತಿರುವುದನ್ನು ನೋಡಬಹುದಾಗಿದೆ. ಫ್ಯಾನ್ಸ್ ಸೆಲ್ಫಿಗಾಗಿ ಒತ್ತಾಯ ಮಾಡುತ್ತಿದ್ದರು ಇದನ್ನು ಗಮನಿಸಿದ ಸಂಜಯ್ ತಮ್ಮ ಪಾಡಿಗೆ ತಾವು ಮುಂದೆ ಸಾಗಿದ್ದಾರೆ. ಸಂಜಯ್ಗೆ ಅಡ್ಡಲಾಗಿ ಅಭಿಮಾನಿಗಳು ನಿಂತಿದ್ದು, ಇದರಿಂದ ಕೋಪಗೊಂಡ ಸಂಜಯ್ ಅಬಿಮಾನಿಗಳನ್ನು ನೂಕಿ ಮುಂದಕ್ಕೆ ಸಾಗಿದ್ದಾರೆ.
ಇತ್ತ ಸಂಜಯ್ ದತ್ ನಡೆಗೆ ಹಲವರು ಕಿಡಿಕಾರಿದ್ದು, ಅವರ ಮುಖ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ ಎಷ್ಟು ಮದ್ಯ ಸೇವಿಸಿದ್ದಾರೆಂದು. ಇಂತಹ ಸಮಯದಲ್ಲಿ ಈ ರೀತಿಯಾಗುವುದು ಸಹಜ ಎಂದು ನಟನ ನಡೆ ಖಂಡಿಸಿ ನೆಟ್ಟಿಗರು ಕಮೆಂಟ್ ಹಾಕಿದ್ದಾರೆ.