ಗುಬ್ಬಿ: ಮದುವೆ ನಾಟಕವಾಡಿ ಹಣ-ಚಿನ್ನಾಭರಣ ದೋಚುತ್ತಿದ್ದ ಧೋಖಾ ಗ್ಯಾಂಗ್ ಅನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷದಲ್ಲಿ 5 ಮದುವೆ ಮಾಡಿಕೊಂಡಿದ್ದ ಐನಾತಿ ಬಲೆಗೆ ಬಿದ್ದಿದ್ದಾಳೆ. ಅವಿವಾಹಿತರನ್ನೇ ಗುರಿಯಾಗಿಸಿಕೊಂಡು ಮದುವೆ ಹೆಸರಲ್ಲಿ ಖೆಡ್ಡಾಕ್ಕೆ ಕೆಡವುತ್ತಿದ್ದ ಈ ಧೋಖಾ ಗ್ಯಾಂಗ್ ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರದಲ್ಲಿ ಕ್ರಿಯಾಶೀಲವಾಗಿತ್ತು. ವರ್ಷದ ಬಳಿಕ ನಾಲ್ವರು ಆರೋಪಿಗಳನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಬ್ರೋಕರ್ ಲಕ್ಷ್ಮೀ (45), ವಧು ಕೋಮಲಾ (45), ಆಕೆಯ ಚಿಕ್ಕಮ್ಮ- ಚಿಕ್ಕಪ್ಪನಂತೆ ನಟಿಸಿದ್ದ ಲಕ್ಷ್ಮೀಬಾಯಿ (50), ಸಿದ್ದಪ್ಪ (60) ಬಂಧಿತ ಆರೋಪಿಗಳು.
ಇದನ್ನೂ ಓದಿ: ಬಾತಿ ಗುಡ್ಡದಲ್ಲಿ ನಿವೇಶನ ನಿರ್ಮಾಣ ಬೇಡ ಜಿಲ್ಲಾಡಳಿತಕ್ಕೆ ಪರಿಸರಪ್ರೇಮಿ ಎಂ.ಜಿ. ಶ್ರೀಕಾಂತ್ ಒತ್ತಾಯ
ಗುಬ್ಬಿ ಸೇರಿ ರಾಜ್ಯದ ಹಲವು ಕಡೆ ಮುಗ್ಧ ಕುಟುಂಬಗಳನ್ನು ಯಾಮಾರಿಸಿದ್ದ ಈ ಗ್ಯಾಂಗ್, 3 ವರ್ಷದಲ್ಲಿ ನಾಲ್ಕು ನಕಲಿ ಮದುವೆ ಮಾಡಿಸಿತ್ತು. ನಗದು-ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದ ಪ್ರಕರಣಗಳ ಬಗ್ಗೆ ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ತಾಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷಯ್ಯ ಎಂಬುವರ 38 ವರ್ಷದ ಮಗ ದಯಾನಂದ ಮೂರ್ತಿ ಅವರನ್ನು ಈ ಗ್ಯಾಂಗ್ ಮೋಸದ ಜಾಲದಲ್ಲಿ ಸಿಲುಕಿಸಿತ್ತು. ಎಲ್ಲಿಯೂ ಅನುಮಾನ ಬಾರದಂತೆ ಬ್ರೋಕರ್ ಮೂಲಕವೇ ಹೆಣ್ಣನ್ನು ತೋರಿಸುವ ನಾಟಕ ಆಡಿರುವ ವಂಚಕರ ತಂಡ, ಸಂಪ್ರದಾಯದಂತೆ ಮದುವೆ ಮಾಡಿಸಿತ್ತು. ಕುಷ್ಟಗಿ ಮೂಲದ ಬಸವರಾಜು ಮೂಲಕ ದಳ್ಳಾಳಿ ಲಕ್ಷ್ಮೀ ಎಂಬಾಕೆ ಪರಿಚಯ ಮಾಡಿಕೊಂಡ ಪಾಲಾಕ್ಷಯ್ಯ, ಮಗನಿಗೆ ಮದುವೆ ಮಾಡಿಸುವ ಆತುರದಲ್ಲಿ ಈ ಜಾಲಕ್ಕೆ ಸಿಲುಕಿಬಿದ್ದಿದ್ದಾರೆ.
ಇದನ್ನೂ ಓದಿ: ಬಾತಿ ಗುಡ್ಡದಲ್ಲಿ ನಿವೇಶನ ನಿರ್ಮಾಣ ಬೇಡ ಜಿಲ್ಲಾಡಳಿತಕ್ಕೆ ಪರಿಸರಪ್ರೇಮಿ ಎಂ.ಜಿ. ಶ್ರೀಕಾಂತ್ ಒತ್ತಾಯ
ಹೆಣ್ಣು ತೋರಿಸಿದ ಎರಡೇ ದಿನದಲ್ಲಿ ಮದುವೆ ಕೂಡ ಮಾಡಿಸಲಾಯಿತು. ಮಗನಿಗೆ ಹೆಣ್ಣು ಸಿಕ್ಕ ಖುಷಿಯಲ್ಲಿ ಹೊಸ ಪರಿಚಯದವರ ಮೂಲ ಶೋಧಿಸಲಿಕ್ಕೆ ಹೋಗದ ಪಾಲಾಕ್ಷಯ್ಯ, ಮದುಮಗಳಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಸೇರಿ ಒಟ್ಟು 25 ಗ್ರಾಂ ಚಿನ್ನಾಭರಣವನ್ನು ನೀಡಿದ್ದರು. ಅಲ್ಲದೆ, ಮದುವೆ ಬ್ರೋಕರ್ ಲಕ್ಷ್ಮೀಗೆ 1.5 ಲಕ್ಷ ರೂ. ಕಮಿಷನ್ ನೀಡಿದ್ದರು. ಮದುವೆ ಮುಗಿಸಿ ಎರಡು ದಿನದ ನಂತರ ಸಂಪ್ರದಾಯದ ಹೆಸರಿನಲ್ಲಿ ಚಿನ್ನಾಭರಣಸಹಿತ ವಧುವನ್ನು ಮನೆಗೆ ವಾಪಸ್ ಕರೆದುಕೊಂಡು ಹೊರಟುಬಿಟ್ಟಿದ್ದರು. ವಾರದ ಬಳಿಕ ವಾಪಸ್ ಬಾರದೆ ಇದ್ದಾಗ ಆತಂಕಗೊಂಡ ಪಾಲಾಕ್ಷಯ್ಯ, ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಧೋಖಾ ಗ್ಯಾಂಗ್ನ ಅಸಲಿ ಬಣ್ಣ ಬಯಲಾಗಿದೆ.
ಬರಿಗೈಲಿ ಗುಬ್ಬಿಗೆ ಮರಳಿದ ಪಾಲಾಕ್ಷಯ್ಯ, ವಂಚನೆ ಮಾಡಿದ್ದ ತಂಡದ ವಿರುದ್ಧ ಡಿಸೆಂಬರ್ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ 8 ತಿಂಗಳಿನಿಂದ ವಂಚಕ ಜಾಲದ ಬೆನ್ನತ್ತಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆೆ.
ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾಗಳಿಂದಲೇ ತುಂಬಲಿದೆ ಚಿತ್ರಮಂದಿರ! ‘ಮಹಾನಟಿ’ಯ ಚಿತ್ರಕ್ಕಿಲ್ಲ ಮಾನ್ಯತೆ?
ಅನಾಥೆ ಎಂದು ನಂಬಿಸಿದ್ದರು…
ಹುಬ್ಬಳ್ಳಿ ಮೂಲದ ಒಬ್ಬ ಒಳ್ಳೆಯ ಹುಡುಗಿ ಇದ್ದಾಳೆ. ಆಕೆಗೆ ತಂದೆ- ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿ ಕೋಮಲಾ ಹೆಸರಿನಲ್ಲಿ ಯುವತಿಯ ಫೋಟೋವನ್ನು ಪಾಲಾಕ್ಷಯ್ಯರ ಪುತ್ರ ದಯಾನಂದಮೂರ್ತಿಗೆ ಬ್ರೋಕರ್ ಲಕ್ಷ್ಮೀ ತೋರಿಸಿದ್ದಳು.ಗಂಡು ನೋಡಲು ಬಂದಿದ್ದ ದಿನವೇ ಮಾತುಕತೆ ನಡೆಸಿ ಮರುದಿನವೇ ಅತ್ತಿಕಟ್ಟೆ ಗ್ರಾಮದ ದೇವಸ್ಥಾನದ ಬಳಿ ಮದುವೆ ಶಾಸ್ತ್ರ ಮಾಡಿ ಮುಗಿಸಿಬಿಟ್ಟಿದ್ದರು.
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ
ವಿನೇಶ್ ಬೆಳ್ಳಿ ಪದಕದ ತೀರ್ಪು ಮತ್ತೆ ಮುಂದೂಡಿಕೆ! ಈ ದಿನದಂದು ಹೊರಬೀಳಲಿದೆ ಮುಂದಿನ ಅಪ್ಡೇಟ್