More

    ಮಾರಕಾಸ್ತ್ರದ ಗ್ಲಾಮರು ಗಾಡಿ; ಮಾಲಾಶ್ರೀ, ಹರ್ಷಿಕಾ ಅಭಿನಯದ ಚಿತ್ರದ ಮೊದಲ ಹಾಡು

    ಬೆಂಗಳೂರು: ಮಲಾಶ್ರೀ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಹಾಗೂ ನಟಿ ಹರ್ಷಿಕಾ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ‘ಮಾರಕಾಸ’. ಇದೊಂದು ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಚಿತ್ರವಾಗಿದ್ದು ಗುರುಮೂರ್ತಿ ಸುನಾಮಿ ನಿರ್ದೇಶಿಸಿದ್ದಾರೆ.

    ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈಗ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಮಂಜು ಕವಿ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿರುವ ‘ಗ್ಲಾಮರು ಗಾಡಿ’ ಎಂದು ಸಾಗುವ ಹಾಡನ್ನು ಅನನ್ಯಾ ಭಟ್ ಹಾಡಿದ್ದು, ಹೀನಾ ಎಂ.ಪಂಚಾಲ್ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ನಾಲ್ಕು ಹಾಡುಗಳಿಗೆ ನಟರಾಜ್ ಧ್ವನಿಯಾಗಿದ್ದಾರೆ.

    ಉಳಿದಂತೆ ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ವಿಶ್ವ ಸಂಕಲನವಿರಲಿದೆ. ಮಾಲಾಶ್ರೀ ಹಾಗೂ ಹರ್ಷಿಕಾ ಜತೆ ಆನಂದ್ ಆರ್ಯನ್, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಪ್ರಮುಖ ತಾರಾಗಣದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts