

ನವದೆಹಲಿ: ಇಂದು (ಆಗಸ್ಟ್ 24) 2021ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿಯನ್ನು ಭಾರತದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಪ್ರಕಟಿಸಿದೆ. ಅನೇಕ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಈ ಬಾರಿ ಟಾಲಿವುಡ್ ಚಿತ್ರರಂಗದ ಸ್ಟೈಲಿಶ್ ಸ್ಟಾರ್, ಅಲ್ಲು ಅರ್ಜುನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರ ಪಟ್ಟಿ ಇದೀಗ ಬಿಡುಗಡೆಯಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ಪುಷ್ಪ: ದಿ ರೈಸ್ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಸಾಲಿನಲ್ಲಿ ಖ್ಯಾತ ನಟ-ನಟಿಯರ ಚಿತ್ರಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.
ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಟಾಲಿವುಡ್‌ನಿಂದ ಈ ಸಾಧನೆ ಮಾಡಿದ ಮೊದಲ ನಟ ಅಲ್ಲು ಅರ್ಜುನ್ ಎಂದು ಹೇಳಲಾಗಿದೆ. ತಮ್ಮ ನೆಚ್ಚಿನ ಐಕಾನ್ ಸ್ಟಾರ್‌ಗೆ ಪ್ರಶಸ್ತಿ ಒಲಿದು ಬಂದ ಬೆನ್ನಲ್ಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ,(ಏಜೆನ್ಸೀಸ್).