ಭಾರತಕ್ಕೆ ಡಬಲ್​ ಕಂಚು ಗೆದ್ದುಕೊಟ್ಟ ಸ್ಟಾರ್​ ಶೂಟರ್​ ಮನು ಭಾಕರ್​​ಗೆ ಅದ್ಧೂರಿ ಸ್ವಾಗತ

Manu Bhaker
Published on

ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಡಬಲ್​ ಕಂಚಿನ ಪದಕ ಪಡೆದ ಶೂಟರ್​ ಮನು ಭಾಕರ್​ ಭಾರತಕ್ಕೆ ಮರಳಿದ್ದು, ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಒಲಿಂಪಿಕ್ಸ್​ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದಾರೆ.

ಮನು ಭಾಕರ್​ ಪೋಷಕರಾದ ರಾಮ್ ಕಿಶನ್‌ ಹಾಗೂ ಸುಮೇಧಾ ಉತ್ತರಾಖಂಡದ ಅಧಿಕಾರಿಗಳು, ಕ್ರೀಡಾ ಪ್ರೇಮಿಗಳು, ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಸೇರಿದಂತೆ 100ಕ್ಕೂ ಅಧಿಕ ಮಂದಿ ತುಂತುರು ಮಳೆಯಲ್ಲೇ ಡೋಲು ಬಾರಿಸಿ, ಪಟಾಕಿ ಸಿಡಿಸಿ, ಡ್ಯಾನ್ಸ್​ ಮಾಡುವ ಮೂಲಕ ಭರ್ಜರಿ ಸ್ವಾಗತ ನೀಡಿದರು. ಮನು ಭಾಕರ್​ ಹಾಗೂ ಅವರ ಕೋಚ್​ ಇದ್ದ ಪೋಸ್ಟರ್​ಗಳನ್ನು ಹಿಡಿದು ಜನ ಘೋಷಣೆ ಕೂಗಿದರು.

ಮಹಿಳೆಯರ 10 ಮೀಟರ್ ಏರ್ ಶೂಟರ್ ಸ್ವರ್ಧೆಯಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ನಂತರ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಕಂಚಿನ ಪದಕವನ್ನು ಗೆದಿದ್ದಾರೆ. 25ಮೀ ಏರ್​ಪಿಸ್ತೂಲ್​ ವಿಭಾಗದಲ್ಲಿ ಅವರು ಹ್ಯಾಟ್ರಿಕ್​ ಪದಕ ಸಾಧಿಸುವ ಕನಸು ಸ್ವಲ್ಪದರಲ್ಲೇ ಭಗ್ನಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net