VIDEO| ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರ ಹರಿದು ಹಾಕಿದ ಮಹಿಳಾ ಬೆಂಬಲಿಗರು

Manipur CM
Published on

ಮಣಿಪುರ: ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ರಾಜ್ಯದಲ್ಲಿ ಸುಮಾರು ಎರಡು ತಿಂಗಳ ಕಾಲ ಜನಾಂಗೀಯ ಹಿಂಸಾಚಾರವನ್ನು ನಿಭಾಯಿಸಿದ ಬಗ್ಗೆ ಟೀಕೆಗೆ ಒಳಗಾಗಿದ್ದರು, ಇಂದು ರಾಜೀನಾಮೆಯ ಅಂಚಿನಲ್ಲಿದ್ದರು ಆದರೆ ಸಾರ್ವಜನಿಕ ಒತ್ತಡದಿಂದ ತಮ್ಮ ಮನಸ್ಸನ್ನು ಬದಲಾಯಿಸಿ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಯು-ಟರ್ನ್ ಹೊಡೆದಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ಗವರ್ನರ್ ಅನುಸೂಯಾ ಉಯ್ಕೆ ನಡುವೆ ಸಭೆ ನಡೆಯಬೇಕಿತ್ತು. ಹೀಗಾಗಿ ಸಿಂಗ್ ತಮ್ಮ ಮನೆಯಿಂದ ಹೊರಡುವವರಿದ್ದರು. ಆದರೆ ತಮ್ಮ ನಿವಾಸದ ಹೊರಗೆ ನಡೆದ ಘಟನೆಯ ನಂತರ ಮಣಿಪುರ ಸಿಎಂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಹಿರಿಯ ಸಚಿವ ಗೋವಿಂದಸ್ ಕೊಂತೌಜಮ್ ಹೇಳಿದ್ದಾರೆ.

ಸಿಎಂ ಬಿರೇನ್ ಸಿಂಗ್ ಅವರ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದ್ದರು. ನೂರಾರು ಮಹಿಳೆಯರ ಗುಂಪು ರಾಜ್ಯಪಾಲರ ನಿವಾಸಕ್ಕೆ ಹೋಗುವ ರಸ್ತೆಯನ್ನು ತಡೆದು ರಾಜೀನಾಮೆ ನೀಡದಂತೆ ಒತ್ತಡ ಹೇರಿದರು. ಇದರಿಂದಾಗಿ ಅವರು ರಾಜ್ಯಪಾಲರ ಭವನವನ್ನು ತಲುಪುವ ಮೊದಲು ಜನರ ಮುಂದೆ ತಮ್ಮ ರಾಜೀನಾಮೆ ಪತ್ರವನ್ನು ಮಹಿಳಾ ಬೆಂಬಲಿಗರು ಹರಿದು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net