80 ವರ್ಷದ ವೃದ್ಧ 60 ವರ್ಷಗಳಿಂದ ನಿದ್ದೆ ಮಾಡಿಲ್ಲ; ವೈದ್ಯರು ಹೇಳಿದ್ದೇನು?….

sleep man
Published on

ವಿಯೆಟ್ನಾಂ: ಒಂದು ದಿನ ಸರಿಯಾಗಿ ನಿದ್ದೆ ಮಾಡದಿದ್ದರೆ ತುಂಬಾ ಸುಸ್ತಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು, ಮರುದಿನ ಯಾವುದೇ ಕೆಲಸದಲ್ಲಿ ಸರಿಯಾಗಿ ಏಕಾಗ್ರತೆ ಇರಲಾರದು.. ಆದರೆ 1962ರಿಂದ ವೃದ್ಧನೊಬ್ಬ ನಿದ್ದೆ ಮಾಡಿಲ್ಲ. ಅಯ್ಯ್ಯೋ ಅವನು ಹೇಗಿದ್ದಾನೋ? ಅವನಿಗೆನಾದ್ರು ಸಮಸ್ಯೆ ಇದ್ಯಾ? ಈ ರೀತಿಯ ಅನೇಕ ಅನುಮಾನಗಳು ನಿಮಗೆ ಬರುತ್ತವೆ.

1962 ರಲ್ಲಿ, ಥಾಯ್ ಎನ್‌ಗೋಕ್ ಎಂಬ 80 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತು. ಅಂದಿನಿಂದ ಅವನಿಗೆ ನಿದ್ರೆ ಬರಲಿಲ್ಲ. ಎಲ್ಲರಂತೆ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆಯಬೇಕು. ಆದರೆ ನಿದ್ರೆ ಬರುತ್ತಿಲ್ಲ. ಅಚ್ಚರಿ ಎನಿಸುತ್ತಿದೆ ಅಲ್ಲವೇ.. ನಿಜವೇ? ಇದು ಸುಳ್ಳೇ? ಎಂಬ ಅನುಮಾನವೂ ಬರುತ್ತದೆ. ಅವನ ಹೆಂಡತಿ, ಮಕ್ಕಳು, ಸ್ನೇಹಿತರು ಮತ್ತು ನೆರೆಹೊರೆಯವರು ಸಹ ಅವನು ಮಲಗಿರುವುದನ್ನು ನೋಡಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಎಷ್ಟೋ ಜನ ಆತನನ್ನು ಪರೀಕ್ಷಿಸಿ ಸೋತಿದ್ದಾರೆ.

ಯೂಟ್ಯೂಬರ್ ಒಬ್ಬರು, ವಿಯೆಟ್ನಾಂನಲ್ಲಿ ಥಾಯ್ ಎನ್ಗೋಕ್ ಅನ್ನು ಪತ್ತೆಹಚ್ಚಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ನೋಡಿದವರು 'ಚಿಕ್ಕವಳಿದ್ದಾಗ ಅವರ ಬಗ್ಗೆ ಓದಿದ ನೆನಪಿದೆ.. ಅವರು ಆರೋಗ್ಯವಾಗಿದ್ದಾರೆ, ನಿದ್ದೆ ಮಾಡುತ್ತಿಲ್ಲ ಎಂದು ಖುಷಿಯಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಥಾಯ್ ಎನ್ಗೋಕ್ ಅಂತಹ ಸಂದರ್ಭಗಳನ್ನು ಎದುರಿಸಲಿಲ್ಲ. ಸದಾ ಒಳ್ಳೆಯ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಹೆಚ್ಚಾಗಿ ಅವರು ಗ್ರೀನ್ ಟೀ ಮತ್ತು ವೈನ್ ಕುಡಿಯಲು ಇಷ್ಟಪಡುತ್ತಾರೆ.

ಥಾಯ್ ಎನ್‌ಗೋಕ್ ಈ ಸ್ಥಿತಿಯನ್ನು ಎದುರಿಸಲು ವೈದ್ಯರಿಗೆ ಸಹ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ. ಪ್ರಪಂಚದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತವೆ. ಅದರಲ್ಲಿ ಇದು ಕೂಡಾ ಒಂದು ಸಂಗತಿಯಾಗಿದೆ. ಅದೇನೇ ಇರಲಿ, ಇಷ್ಟು ವರ್ಷ ನಿದ್ದೆ ಮಾಡದ ಅವರು ಇನ್ನೂ ಆರೋಗ್ಯವಾಗಿದ್ದಾರೆ ಎಂದೇ ಹೇಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net