

ವಿಟ್ಲ: ಶಿಷ್ಯರಿಗೆ ಗುರು ಸರಿಯಾದ ಗುರಿಯನ್ನು ತೋರಿಸಬೇಕು. ಭಗವಂತನ ಪ್ರೀತಿಯನ್ನು ತಿಳಿಯುವ ಕಾರ್ಯ ಹಿಂದುಗಳಿಂದ ನಡೆಯಬೇಕು. ಸಂತನ ಬದುಕು ಸಮಾಜಕ್ಕೆ ಸಮರ್ಪಣೆಯಾಗಿದ್ದು, ಭಕ್ತರ ನೋವನ್ನು ಸ್ವೀಕಾರ ಮಾಡುತ್ತಾನೆ. ಸನಾತನ ಸಂಸ್ಕೃತಿಯನ್ನು ಯುವ ಪೀಳಿಗೆಗೆ ತಿಳಿಸುವ ಜವಾಬ್ದಾರಿಯ ಜತೆಗೆ ಹಿಂಛ್ಠ ಸಮಾಜ ಕ್ಷೀಣಿಸದ ರೀತಿಯಲ್ಲಿ ಎಚ್ಚರ ವಹಿಸಬೇಕಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಭಾನುವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿದ್ವಾಂಸ ಗೋವಿಂದರಾಜ ಭಟ್ ಚಾಕಟೆ ಮಾತನಾಡಿ, ಮಕ್ಕಳು ಭವ್ಯ ಭಾರತದ ಭವಿಷ್ಯವಾಗಿದ್ದು, ಉತ್ತಮ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಆಂಗ್ಲ ಮಾಧ್ಯಮಕ್ಕೆ ಮಾರು ಹೋಗಿ ದೇಶದ ಸಂಸ್ಕೃತಿಯನ್ನು ಮರೆಯಬಾರದು. ಜೀವನದಲ್ಲಿ ಆಚರಣೆಗಳನ್ನು ಮಾಡಿ ಇನ್ನೊಬ್ಬರಿಗೆ ಹೇಳಬೇಕು ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಚೆನ್ನಿಕುಡೇಲು ತರವಾಡು ಮನೆಯ ಅಧ್ಯಕ್ಷ ಚೆನ್ನಪ್ಪ ಎರುಗಲ್ಲು, ಅರಿಯಪ್ಪಾಡಿ ಮೂವರು ಉಳ್ಳಾಕಲು ದೈವಸ್ಥಾನದ ನಾರಾಯಣ ಕುಲಾಲ್, ಮಂಗಳೂರು ಪದವು ಕಾಲೇಜು ಉಪನ್ಯಾಸಕಿ ರೇಷ್ಮಾ ವಿನಯ ಕಡೆಗೋಳಿ, ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ, ಶ್ರೀಧಾಮ ಮಿತ್ರವಂದದ ಅಧ್ಯಕ್ಷ ಬಾಲಕಷ್ಣ ರೈ ಕೆಳಗಿನಮನೆ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಎಸ್. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.