ಕರಾವಳಿ ರೈಲ್ವೆಯಲ್ಲಿ ಬದಲಾವಣೆ : ಕ್ಯಾ.ಬ್ರಿಜೇಶ್ ಚೌಟ ಭರವಸೆ

abhinandane
ಸಂಸದ ಕ್ಯಾ.ಬ್ರಿಜೇಷ್ ಚೌಟ ಅವರನ್ನು ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಗೌರವಿಸಲಾಯಿತು
Published on

ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ರೈಲ್ವೆ ಸೌಲಭ್ಯದಲ್ಲಿ ದೊಡ್ಡ ಬದಲಾವಣೆ ತರಲಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಸಹಿತ ನಾನಾ ಯೋಜನೆ ಜಿಲ್ಲೆಗೆ ತರುವ ಪ್ರಯತ್ನ, ಕಾರ್ಯಕರ್ತರ ಧ್ವನಿಯಾಗುವ ಯತ್ನ ನಿರಂತರವಾಗಿರಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಭಾನುವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಮಯಿಂದ ನೂರಾರು ಮನೆ, ಕೃಷಿಗೆ ಹಾನಿಯಾಗಿದೆ. ಆನೆ ದಾಳಿಯಿಂದ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಂದು ಸರ್ಕಾರ ಅದಕ್ಕೆ ಅನುದಾನ ಕೊಡುವ ಸ್ಥಿತಿಗತಿಯಲ್ಲಿಲ್ಲ. ಪ್ರತಿ ಗ್ರಾಪಂನಲ್ಲಿ ಆಗಸ್ಟ್ 15ರ ಬಳಿಕ ಜನಸ್ಪಂದನೆ ಕಾರ್ಯಕ್ರಮ ಆಯೋಜಿಸುತ್ತೇನೆ. ಮಡಿವಾಳ, ಗೌಡ, ಕುಲಾಲ ಸಮುದಾಯ ಭವನಕ್ಕೆ ನೀಡಲು ಸರ್ಕಾರದಲ್ಲಿ ದುಡ್ಡಿಲ್ಲ, ಹಾಗಾಗಿ ನನ್ನ ಶಾಸಕರ ನಿಧಿ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ನೆರವು ಒದಗಿಸುವುದಾಗಿ ತಿಳಿಸಿದರು.

ಕ್ಯಾ.ಬ್ರಿಜೇಶ್ ಚೌಟ ಹಾಗೂ ಹರೀಶ್ ಪೂಂಜ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಮಂಡಲದ ವತಿಯಿಂದ ಅಭಿನಂದಿಸಲಾಯಿತು. ಹರಿಕೃಷ್ಣ ಬಂಟ್ವಾಳ್, ತಿಲಕ್ ರಾಜ್ ಕೃಷ್ಣಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅವರನ್ನು ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಮಂಡಲ ಪ್ರಭಾರಿ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಜಿಲ್ಲಾ ಚುನಾವಣಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿಗಳಾದ ಸೀತಾರಾಮ್ ಬಿ.ಎಸ್., ವಸಂತಿ ಮಚ್ಚಿನ, ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ಗಣೇಶ್ ನಾವೂರು, ಮಂಡಲ ಪ್ರ.ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಸಿದರು. ಮಂಡಲ ಪ್ರ.ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿ. ರಾಜೇಶ್ ಪೆಂರ್ಬುಡ ನಿರೂಪಿಸಿದರು.

ಕಾರ್ಯಕರ್ತರು ಜವಾಬ್ದಾರಿ ಯಶಸ್ವಿಯಾಗಿಸುವ ನೆಲೆಯಲ್ಲಿ ಸಕ್ರಿಯವಾಗಿ ಜೋಡಿಸಿಕೊಳ್ಳಬೇಕು. ಎಲ್ಲ ಶಕ್ತಿ ಕೇಂದ್ರಗಳಲ್ಲಿ ಹಾಗೂ ಬೂತ್‌ಗಳಲ್ಲಿ ಮನ್ ಕಿ ಬಾತ್ ಆಯೋಜನೆ ಮಾಡಬೇಕು. ಈಗಾಗಲೆ ಸಂಸದರು ರೈಲ್ವೆ ಸಚಿವರೊಂದಿಗೆ ಸಭೆ ಕರೆದು ಕರಾವಳಿ ಜನತೆಗೆ ಬೇಡಿಕೆಗೆ ಕಿವಿಯಾಗಿದ್ದಾರೆ. ಕಾರ್ಯಕರ್ತರೆಲ್ಲರು ಅಭಿವೃದ್ಧಿ ಜತೆಗೆ ಜನಸಂಪರ್ಕ ಇಟ್ಟುಕೊಳ್ಳಿ.-ಸತೀಶ್ ಕುಂಪಲ, ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net