More

    ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್​ ಸಾಹಸಕ್ಕೆ ಭಾರಿ ಮೆಚ್ಚುಗೆ!

    ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಅವರ ಸಾಹಸಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಂತ ಯಾವುದೋ ದೊಡ್ಡ ಪ್ರಕರಣವೊಂದನ್ನು ಭೇದಿಸಲಾಗಿದೆ ಅಥವಾ ಯಾರೋ ಭಾರಿ ಕ್ರಿಮಿನಲ್​ನನ್ನು ಬಂಧಿಸಲಾಗಿದೆ ಅಂತಲ್ಲ. ಈಗ ಮೆಚ್ಚುಗೆಗೆ ಒಳಗಾಗಿರುವ ಅವರ ಸಾಹಸವೇ ಬೇರೆ.

    ಹೊಸ ವರ್ಷದ ಎರಡನೆಯ ದಿನ ಭಾರಿ ಉತ್ಸಾಹ ತೋರಿರುವ ಅವರು ಜನರಲ್ಲಿ ದೈಹಿಕಕ್ಷಮತೆಯ ಮಹತ್ವ ತಿಳಿಸಲು ಸಾಹಸವೊಂದನ್ನು ಮಾಡಿದ್ದಾರೆ. #fitindia #FitIndiaMovement ಹ್ಯಾಷ್​ಟ್ಯಾಗ್​ ಮೂಲಕ ಅವರು ತಮ್ಮ ದೈಹಿಕಕ್ಷಮತೆಯ ಪ್ರದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: 17 ಸಲ ಎಸ್ಕೇಪ್ ಆಗಿದ್ದವ ಮತ್ತೆ ಸಿಕ್ಕಿಬಿದ್ದ; 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ; ಇವನ ಹೆಸರೇ…

    ನಿಂತಿದ್ದ ವ್ಯಕ್ತಿಯೊಬ್ಬರ ಹಿಂದಿನಿಂದ ಓಡಿಬಂದು ಅವರ ತಲೆಯ ಮೇಲಿನಿಂದ ಜಿಗಿದು ಮುಂದಕ್ಕೆ ಬರುವ ಈ ವಿಡಿಯೋವನ್ನು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಪೋಸ್ಟ್ ಮಾಡಿದ್ದು, ಐದೇ ಗಂಟೆಗಳಲ್ಲಿ ಅದು 15 ಸಾವಿರ ವೀಕ್ಷಣೆ ಕಂಡಿದ್ದು, 3800ಕ್ಕೂ ಅಧಿಕ ಮಂದಿ ಅದನ್ನು ಮೆಚ್ಚಿದ್ದಾರೆ. ಮಾತ್ರವಲ್ಲ, 200 ಅಧಿಕ ಜನರು ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts