ಕುಡಿದ ಮತ್ತಿನಲ್ಲಿ ಮಗನ ಮೇಲೆರಗಿದ ತಾಯಿ ಮಾಡಿದ್ದೇನು?

Mother Son
Published on

ಮಂಡ್ಯ (ಕೆ.ಆರ್.ಪೇಟೆ): ಕುಡಿದ ಮತ್ತಿನಲ್ಲಿ ತಾಯಿಯೇ ಮಗನ ಮೇಲೆ ಹಲ್ಲೆ ಮಾಡಿ ತುಟಿಯನ್ನು ಕಚ್ಚಿ ತುಂಡರಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಸೋಮವಾರ ರಾತ್ರಿ‌ ಜರುಗಿದೆ.

ಗ್ರಾಮದ ಲೇಟ್ ರಂಗನಾಥ ಎಂಬುವರ ಪತ್ನಿ ಪಾರ್ವತಿ ಕುಡಿದ ಮತ್ತಿನಲ್ಲಿ‌ ತನ್ನ ಮಗ ಮೋಹನ್ (28) ಎಂಬುವವನ ಮೇಲೆ‌ ರಾತ್ರಿ 7 ಗಂಟೆಯಲ್ಲಿ ಏಕಾಏಕಿ ಜಗಳ ತೆಗೆದು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಸೊಸೆ ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ. ಕುಡಿದ ಮತ್ತಿನಲ್ಲಿ ಮಗನ ತುಟಿಯನ್ನು‌ ಕಚ್ಚಿ‌ ತುಂಡರಿಸಿದ್ದಾಳೆ.

ಮೋಹಾನ್​ ಚೀರಾಟ ಕೇಳಿ ಅಕ್ಕಪಕ್ಕದ ಜನರು ಆತನನ್ನು ಕೆ.ಆರ್.ಪೇಟೆ ದುಂಡಶೆಟ್ಟಿ-ಲಕ್ಷ್ಮಮ್ಮ ಸರ್ಕಾರಿ ಆಸ್ಪತ್ರೆಗೆ ‌ದಾಖಲು‌ ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿ‌ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದೆ ಎಂಬ ವೈದ್ಯರ ಸಲಹೆ ಮೇರೆಗೆ‌ ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ‌ ದಾಖಲು ಮಾಡಲಾಗಿದೆ. ಈ ಸಂಬಂಧ‌ ಯಾವುದೇ ದೂರು‌ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net