More

    ಜೂಲನ್, ಸ್ಮೃತಿ ಸಾಹಸ; ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಭರ್ಜರಿ ಗೆಲುವು

    ಲಖನೌ: ಅನುಭವಿ ವೇಗಿ ಜೂಲನ್ ಗೋಸ್ವಾಮಿ (42ಕ್ಕೆ 4) ಮತ್ತು ಎಡಗೈ ಬ್ಯಾಟುಗಾರ್ತಿ ಸ್ಮೃತಿ ಮಂದನಾ (80*ರನ್, 64 ಎಸೆತ, 10 ಬೌಂಡರಿ, 3 ಸಿಕ್ಸರ್) ಸಾಹಸದಿಂದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಮಿಥಾಲಿ ರಾಜ್ ಪಡೆ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ 41 ಓವರ್‌ಗಳಲ್ಲಿ 157 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ ತಂಡ 28.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 ರನ್ ಪೇರಿಸಿ ಗೆಲುವು ದಾಖಲಿಸಿತು. ಜೆಮೀಮಾ ರೋಡ್ರಿಗಸ್ (9) ಬೇಗನೆ ಔಟಾದರೂ, ಸ್ಮತಿ ಹಾಗೂ ಒನ್‌ಡೌನ್ ಬ್ಯಾಟುಗಾರ್ತಿ ಪೂನಂ ರಾವತ್ (62*ರನ್, 89 ಎಸೆತ, 8 ಬೌಂಡರಿ) ಮುರಿಯದ 2ನೇ ವಿಕೆಟ್‌ಗೆ ಪೇರಿಸಿದ 138 ರನ್ ನೆರವಿನಿಂದ ಭಾರತ ಇನ್ನೂ 21.2 ಓವರ್ ಬಾಕಿ ಇರುವಂತೆಯೇ ಜಯಿಸಿತು.

    ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್‌ಗೆ ಕರೊನಾ ಕಾಟ, ಟಿ20 ಟೂರ್ನಿ ಅರ್ಧದಲ್ಲೇ ಸ್ಥಗಿತ

    ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತದ ನಡುವೆಯೂ ನಾಯಕಿ ಸುನ್ ಲುಸ್ (36) ಮತ್ತು ಲಾರಾ ಗುಡಾಲ್ (49) ಆಸರೆಯಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿತ್ತು. ಆದರೆ ಜೂಲನ್ ಜತೆಗೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ ತಂಡ 27 ರನ್ ಅಂತರದಲ್ಲಿ ಕೊನೇ 5 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತ್ತು. 3ನೇ ಪಂದ್ಯ ಶುಕ್ರವಾರ ನಡೆಯಲಿದೆ.

    ದಕ್ಷಿಣ ಆಫ್ರಿಕಾ: 41 ಓವರ್‌ಗಳಲ್ಲಿ 157 (ಸುನ್ ಲುಸ್ 36, ಗುಡಾಲ್ 49, ಪ್ರೀಜ್ 11, ಕಾಪ್ 10, ತ್ರಿಷಾ ಚೆಟ್ಟಿ 12, ಜೂಲನ್ 42ಕ್ಕೆ 4, ಮಾನ್ಸಿ ಜೋಶಿ 23ಕ್ಕೆ 2, ರಾಜೇಶ್ವರಿ 37ಕ್ಕೆ 3). ಭಾರತ: 28.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 (ಜೆಮೀಮಾ 9, ಸ್ಮೃತಿ ಮಂದನಾ 80*, ಪೂನಂ ರಾವತ್ 62*, ಶಬ್ನಿಮ್ 46ಕ್ಕೆ 1). ಪಂದ್ಯಶ್ರೇಷ್ಠ: ಜೂಲನ್ ಗೋಸ್ವಾಮಿ.

    ಕ್ರೀಡಾ ವಿಶ್ಲೇಷಕಿಯನ್ನು ವರಿಸಲಿದ್ದಾರೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ..?

    ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts