More

    ಪಾಕಿಸ್ತಾನ ಸೂಪರ್ ಲೀಗ್‌ಗೆ ಕರೊನಾ ಕಾಟ, ಟಿ20 ಟೂರ್ನಿ ಅರ್ಧದಲ್ಲೇ ಸ್ಥಗಿತ

    ಲಾಹೋರ್: ಭಾರತದ ಪ್ರತಿಷ್ಠಿತ ಐಪಿಎಲ್ ಟೂರ್ನಿ ಕರೊನಾ ಹಾವಳಿಯ ನಡುವೆಯೂ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿತ್ತು. ಆದರೆ ಇದೀಗ ಪಾಕಿಸ್ತಾನದಲ್ಲಿ ಇದೇ ಮಾದರಿಯ ಟಿ20 ಲೀಗ್‌ನಲ್ಲಿ ಬಯೋ-ಬಬಲ್ ವಲಯದಲ್ಲೇ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಟೂರ್ನಿಯನ್ನೇ ದಿಢೀರ್ ಸ್ಥಗಿತಗೊಳಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸಿರುವ ಆರು ಕ್ರಿಕೆಟಿಗರಿಗೆ ಕರೊನಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಟೂರ್ನಿಯ ಒಟ್ಟು 34 ಪಂದ್ಯಗಳ ಪೈಕಿ ಇದುವರೆಗೆ 14 ಪಂದ್ಯಗಳಷ್ಟೇ ನಡೆದಿವೆ.

    ಕಳೆದ ಸೋಮವಾರ ಆಸೀಸ್ ಸ್ಪಿನ್ನರ್ ವಾದ್ ಅಹ್ಮದ್ ಕರೊನಾ ಪಾಸಿಟಿವ್ ಆಗುತ್ತಿದ್ದಂತೆ ಟೂರ್ನಿಗೆ ಆತಂಕ ಸೃಷ್ಟಿಯಾಗಿತ್ತು. ಅದರ ಬೆನ್ನಲ್ಲೇ ಮತ್ತಿಬ್ಬರು ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಪಾಸಿಟಿವ್ ಆಗಿದ್ದರು. ಗುರುವಾರ ಮತ್ತೆ ಮೂವರು ಕ್ರಿಕೆಟಿಗರಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಒಟ್ಟು ಪ್ರಕರಣ 7ಕ್ಕೇರಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಕ್ಷಣವೇ ಟೂರ್ನಿಗೆ ಬ್ರೇಕ್ ಹಾಕಿದ್ದು, ಬಯೋ-ಬಬಲ್‌ನೊಳಗೆ ಕರೊನಾ ಕಾಣಿಸಿಕೊಂಡಿದ್ದು ಹೇಗೆಂದು ತನಿಖೆ ಆರಂಭಿಸಿದೆ.

    ಇದನ್ನೂ ಓದಿ: ಮ್ಯಾಕ್ಸ್‌ವೆಲ್ ಸಿಕ್ಸರ್ ಆರ್ಭಟಕ್ಕೆ ಮುರಿದ ಪ್ರೇಕ್ಷಕರ ಆಸನ, ಉತ್ತಮ ಕೆಲಸಕ್ಕೆ ನೆರವಾಯಿತು!

    ಕಳೆದ ವರ್ಷವೂ ಮಾರ್ಚ್‌ನಲ್ಲಿ ಕರೊನಾ ಹಾವಳಿ ಶುರುವಾದ ಸಮಯದಲ್ಲಿ ಪಿಎಸ್‌ಎಲ್ ಸ್ಥಗಿತಗೊಂಡಿತ್ತು. ಆದರೆ ಆಗ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದವು ಮತ್ತು ನಾಕೌಟ್-ಫೈನಲ್ ಪಂದ್ಯ ನವೆಂಬರ್‌ನಲ್ಲಿ ನಡೆದಿತ್ತು. ಹಾಲಿ ಟೂರ್ನಿ ಫೆಬ್ರವರಿ 20ರಂದು ಆರಂಭಗೊಂಡಿತ್ತು.

    VIDEO: ಮೈದಾನದಲ್ಲೇ ಬೆನ್ ಸ್ಟೋಕ್ಸ್ ಜತೆ ವಿರಾಟ್ ಕೊಹ್ಲಿ ವಾಗ್ವಾದ ಮಾಡಿದ್ಯಾಕೆ..?

    ವಿರಾಟ್ ಕೊಹ್ಲಿ ಬಳಗಕ್ಕೆ ಮೊದಲ ದಿನದ ಗೌರವ, ಪ್ರವಾಸಿಗರಿಗೆ ಸ್ಪಿನ್ ಕಡಿವಾಣ

    VIDEO: ಓವರ್‌ಗೆ ಆರು ಸಿಕ್ಸರ್; ಯುವರಾಜ್, ಗಿಬ್ಸ್ ಜತೆ ಸಿಕ್ಸರ್ ಕ್ಲಬ್ ಸೇರಿದ ಕೈರಾನ್ ಪೊಲ್ಲಾರ್ಡ್,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts