More

    ತಂಬುಕುಟ್ಟೀರ ತಂಡಕ್ಕೆ 78 ರನ್‌ಗಳ ಭರ್ಜರಿ ಗೆಲುವು

    ಗೋಣಿಕೊಪ್ಪ: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆಯ ವಿಜಯಲಕ್ಷ್ಮೀ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ 23ನೇ ದಿನದ ಪಂದ್ಯದಲ್ಲಿ 6 ತಂಡಗಳು ಗೆಲುವಿನ ನಗೆ ಬೀರಿದವು.


    ಮಾಚೆಟ್ಟಿರ ಮತ್ತು ಕಾಳಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳಿಮಾಡ ತಂಡ 7 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತು. ಮಾಚೆಟ್ಟಿರ ತಂಡ 5.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.


    ಚೆನ್ನಪಂಡ ಮತ್ತು ತಂಬುಕುಟ್ಟೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಂಬುಕುಟ್ಟೀರ ತಂಡ 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಚೆನ್ನಪಂಡ ತಂಡ 7 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿ 78 ರನ್ ಗಳ ಸೋಲು ಕಂಡಿತು.


    ಅಳಮೇಂಗಡ ಮತ್ತು ಚಿರಿಯಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚಿರಿಯಪಂಡ ತಂಡ 7 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತು. ಅಳಮೇಂಗಡ ತಂಡ 7 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ 5 ರನ್ ಗಳ ಸೋಲು ಕಂಡಿತು.


    ಮಾಳೇಟಿರ (ಕೆದಮುಳ್ಳೂರು) ಮತ್ತು ಮುಕ್ಕಾಟಿರ (ಕುಂಜಿಲಗೇರಿ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಮಾಳೇಟಿರ 7 ತಂಡ ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ಮುಕ್ಕಾಟಿರ ತಂಡ 7 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ 36 ರನ್ ಗಳ ಸೋಲು ಕಂಡಿತು.


    ಮಾಚಮಾಡ ಮತ್ತು ಗಾಡಂಗಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಾಚಮಾಡ ತಂಡ 7 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತು. ಗಾಡಂಗಡ ತಂಡ 7 ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ 65 ರನ್ ಸೋಲು ಕಂಡಿತು.


    ಮುಕ್ಕಾಟಿರ (ಹರಿಹರ- ಬೆಳ್ಳೂರು) ಮತ್ತು ಮಾಲೇಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ತಂಡ ಮುಕ್ಕಾಟಿರ ಓವರ್‌ಗಳಲ್ಲಿ 7 ವಿಕೆಟ್ 6 ನಷ್ಟಕ್ಕೆ ರನ್ 47 ಗಳಿಸಿತು. ಮಾಳೇಟಿರ ತಂಡ 5.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts