ಗುದನಾಳದಲ್ಲಿ ಚಿನ್ನಾಭರಣ ಬಚ್ಚಿಟ್ಟು ಸಾಗಾಟ; ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನ

Gold Smugling
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದ ಪ್ರಕರಣಗಳು ಹೆಚ್ಚಾಗಿಯೇ ನಡೆಯುತ್ತಿದೆ.

ಹೀಗಿರುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 21 ಲಕ್ಷ ರೂ. ಮೌಲ್ಯದ 403 ಗ್ರಾಂ ಚಿನ್ನಾಭರಣವನ್ನು ಪ್ರಯಾಣಿಕನೊಬ್ಬನ್ನು ಗುದನಾಳದಲ್ಲಿ ಬಚ್ಚಿಟ್ಟ ಸಾಗಿಸುವ ವೇಳೆ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬಂಧನ

ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಜೆಡ್ಡಾದಿಮದ ಇಂಡಿಗೋ ವಿಮಾನ ಸಂಖ್ಯೆ 6E-068 ಮೂಲಕ ಬರುತ್ತಿರುವುದಾಗಿ ಮಾಹಿತಿ ಬಂದಿದೆ.

Gold

ಬಳಿಕ ಪ್ರಯಾಣಿಕನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ವೇಳೆ ಪೇಸ್ಟ್​ ರೂಪದಲ್ಲಿ ಚಿನ್ನವನ್ನು ಕ್ಯಾಪ್ಸ್ಯೂಲ್​ಗಳನ್ನು ಗುದನಾಳದಲ್ಲಿ ಇಟ್ಟು ಸಾಗಿಸುತ್ತದ್ದ್ದು ಕಂಡು ಬಂದಿದೆ.

ಬೇರೆಡೆ ಸಾಗಿಸಲು ಪ್ಲ್ಯಾನ್​

ಜೆಡ್ಡಾದಿಂದ ಬಂದ ಬಳಿಕ ಬಮಧಿತ ಆರೋಪಿ ಹಯದರಾಬಾದ್​ನಿಂದ ಚಿನ್ನವನ್ನು ಜೈಪುರಕ್ಕೆ ಸಾಗಿಸಲು ಅಗತ್ಯ ಮಾಡಿಕೊಂಡಿದರ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ

ಬಂಧಿತ ಆರೋಪಿಯಿಂದ 21,63,707 ಲಕ್ಷ ರೂಪಾಯಿ ಮೌಲ್ಯದ 403 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net