ಸಿನಿಮಾ

ಇಳಿವಯಸ್ಸಿನಲ್ಲಿ ಮೋಹದ ಬಲೆಗೆ ಬಿದ್ದು 7 ಲಕ್ಷ ರೂ. ಕಳೆದುಕೊಂಡ ವೃದ್ಧ…!

ನವದೆಹಲಿ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

ಇದೀಗ ಇದೇ ರೀತಿಯ ಘಟನೆಯೊಂದರಲ್ಲಿ 75 ವರ್ಷದ ಹಿರಿಯ ನಾಗರೀಕರೊಬ್ಬರು ಸೈಬರ್​ ವಂಚಕರ ಬೆಲೆಗೆ ಸಿಲುಕಿ 7,34,500 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ಧಾರೆ.

ಚಾಟ್​ ಮಾಡಿ ಹಣ ಕಳೆದುಕೊಂಡ ವೃದ್ಧ

ಸೈಬರ್​ ವಂಚಕರು ಕೆ.ಎನ್​. ಜೋಶಿ(75) ಎಂಬುವವರಿಗೆ ಅಶ್ಲೀಲ ವಿಡಿಯೋ ಚಾಟ್​ ಕರೆ ಮಾಡಿ ವೃದ್ದನನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡಿದ್ಧಾರೆ.

ಜನವರಿ 15, 2023ರಂದು ಜೋಶಿ ಅವರಿಗೆ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್​ನಲ್ಲಿ ಸಂದೇಶ ಕಳುಹಿಸಲಾಗಿದೆ. ಇದಾದ ಕೆಲ ಹೊತ್ತಿನ ಬಳಿಕ ವಿಡಿಯೋ ಕರೆ ಬಂದಿದ್ದು ಇದರಲ್ಲಿ ಮಹಿಳೆ ಒಬ್ಬರು ನಗ್ನವಾಗಿ ಕಾಣಿಸಿಕೊಂಡಿದ್ದಾಳೆ.

ಇದಾದ ಬಳಿಕ ಜನವರಿ 17ರಂದು ಜೋಶಿ ಅವರಿಗೆ ವಂಚಕರು ಮಾರ್ಫ್​ ಮಾಡಿದ ಆಸ್ಲೀಲ ವಿಡಿಯೋ ಒಂದನ್ನು ಕಳುಹಿಸಿದ್ದು 61,000 ಸಾವಿರ ರೂಪಾಯಿ ಪಾವತಿಸುವಂತೆ ಸೂಚಿಸಿದ್ದಾರೆ. ಇಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

phone call

ಅಧಿಕಾರಿ ಸೋಗಿನಲ್ಲಿ ವಂಚನೆ

ಜನವರಿ 25ರಂದು ವಂಚಕ ತಾನು ದೆಹಲಿ ನಗರ ಪೊಲೀಸ್​ ಆಯುಕ್ತ ರಾಕೇಶ್​ ಅಸ್ಥಾನಾ ಎಂದು ಜೋಶಿ ಅವರಿಗೆ ಕರೆ ಮಾಡಿದ್ದು ಅಂಜಲಿ ಎಂಬುವವರ ಜೊತೆ ನೀವು ಸಂಪರ್ಕ ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಅಂಜಲಿ ಎಂಬುವವರ ಹೆಸರು ನೇಹಾ ಆಗಿದ್ದು ಇವರು ದೊಡ್ಡ ಡ್ರಗ್ಸ್​ ಸ್ಮಗ್ಲರ್​ ಎಂದು ಹೇಳಿ FIR ಪ್ರತಿಯನ್ನು ವಾಟ್ಸ್​ಆ್ಯಪ್​ನಲ್ಲಿ ಹಂಚಿಕೊಂಡಿದ್ದಾನೆ. ಬಳಿಕ ಧ್ಯಾನೇಶ್ವರ್​ ಭಾಜಿರಾವ್​ ಎಂಬುವವರನ್ನು ಸಂಪರ್ಕಿಸುವಂತೆ ಹೇಳಿ ಅವರ ನಂಬರ್​ ನೀಡಿ ಕರೆ ಕಟ್​ ಮಾಡಿದ್ದಾನೆ.

ಇದಾದ ಬಳಿಕ ಧ್ಯಾನೇಶ್ವರ್​ ಎಂಬುವವರನ್ನು ಸಂಪರ್ಕಿಸಿದ ಜೋಶಿ ಅವರಿಗೆ ಆತ ವಿಡಿಯೋ ಹೊರಬಾರದಂತೆ ನೋಡಿಕೊಳ್ಳಲಾಗುವುದು ಇದಕ್ಕೆ ನೀವು 64,5000 ಸಾವಿರ ರೂಪಾಯಿ ಪಾವತಿಸಿ ಕೆಲಸ ಮುಗಿದ ಬಳಿಕ ವಾಪಸ್​ ಜಮೆ ಮಾಡುವುದಾಗಿ ವಂಚಕ ನಂಬಿಸಿದ್ದಾನೆ.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ವೈ.ಎಸ್.ವಿ. ದತ್ತ

7ಲಕ್ಷ ರೂಪಾಯಿ ವಂಚನೆ

ಬಳಿಕ ವಂಚಕರು ವೃದ್ದನಿಗೆ ವಿಡಿಯೋ ವಿಚಾರ ಗೊತ್ತಾಗಿ ಅಂಜಲಿ ಅವರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಡಿಯೋ ಒಂದನ್ನು ಕಳುಹಿಸಿದ್ದಾರೆ.

ನಿಮ್ಮಿಂದ ಅವರು ಮೃತಪಟ್ಟಿದ್ದಾರೆ ಎಂದು ಜೋಶಿ ಅವರನ್ನು ಬೆದರಿಸಿದ ಆರೋಪಿಗಳು ವಿಚಾರ ಹೊರಬಾರದೆ ಇರುವುದಂತೆ ನೋಡಿಕೊಳ್ಳಬೇಕೆಂದರೆ 6ಲಕ್ಷ ರೂಪಾಯಿ ಪಾವತಿಸುವಂತೆ ವೃದ್ದನಿಗೆ ಸೂಚಿಸಿ ಹಣ ಪಡೆದಿದ್ದಾರೆ.

ಆದರೆ, ಹಣ ವಾಪಸ್​ ನೀಡುವಂತೆ ಕೇಳಿದಾಗ ಸಬೂಬು ಹೇಳಿ ಅಥವಾ ಬೆದರಿಸಿ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದನ್ನು ಗಮನಿಸಿದ ಜೋಶಿ ಬಳಿಕ ತಾನು ಮೋಸ ಹೋಗಿರುವುದಾಗಿ ಅರ್ಥೈಸಿಕೊಂಡಿದ್ದಾರೆ.

Cyber Crime (1)

ಉತ್ತೇಜನ ನೀಡುತ್ತಿದ್ಧಾರೆ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ರಾಕೇಶ್​ ಅಸ್ತಾನ ಎಂಬ ಹೆಸರಿನ ಅಧಿಕಾರಿಯೂ 2022ರಲ್ಲಿ ನಿವೃತ್ತಿಯಾಗಿದದ್ದಾರೆ.

ವಂಚಕರು ಕೆಲವೊಮ್ಮೆ ಡೌನ್​ಲೋಡ್​ ಮಾಡಲಾದ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ. ಜನರು ಕರೆಗಳನ್ನು ಸ್ವೀಕರಿಸಿ ಮೋಸ ಹೋಗುವ ಮೂಲಕ ಆರೋಪಿಗಳಿಗೆ ಉತ್ತೇಜನ ನೀಡುತ್ತಾರೆ.

ಪ್ರಕರಣವನ್ನು ದಾಖಲಿಸಿಕೊಂಡಿದ್ದು ಶೀಘ್ರದಲ್ಲೇ ಬಂಧಿಸಿ ವಂಚಕರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಅಧಿಕಾರಿ ಒಬ್ಬರು ಹೇಳಿದ್ದಾರೆ.

Latest Posts

ಲೈಫ್‌ಸ್ಟೈಲ್